ಕರಿಕೆ, ನ. 29: ಕೊಡಗು ಜಿಲ್ಲೆ ಆರೋಗ್ಯ ಇಲಾಖೆಯಿಂದ ಇತ್ತೀಚೆಗೆ ಕರಿಕೆ ಗ್ರಾಮ ವ್ಯಾಪ್ತಿಯ ಸಾರ್ವಜನಿಕರಲ್ಲಿ ಜನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯ ಕ್ರಮದಡಿ ನಾಗರಿಕರಿಗೊಂದು ಸವಾಲು ಡೆಂಗೀ ಮತ್ತು ಚಿಕನ್ ಗುನ್ಯ ನಿಯಂತ್ರಣ ಹಾಗೂ 2025 ಕ್ಕೆ ಕೊಡಗು ಕ್ಷಯರೋಗ ಮುಕ್ತ ಭಾರತ ನಿರ್ಮಾಣ ಕಾರ್ಯಕ್ರಮದಡಿಯಲ್ಲಿ ಕ್ಷಯಮುಕ್ತ ಜಿಲ್ಲೆಯನ್ನಾಗಿಸುವ ಮೂಲ ಉದ್ದೇಶದಿಂದ ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕರು ಮನೆ ಮನೆಗೆ ಭೇಟಿ ನೀಡಿ ಸಂಭಾವ್ಯ ಕ್ಷಯರೋಗವನ್ನು ಗುರುತಿಸಿ ರೋಗ ಪೀಡಿತರಿಗೆ ಅಗತ್ಯ ಔಷಧಿಗಳನ್ನು ಸರಬರಾಜು ಮಾಡುತ್ತಿದ್ದು, ಆಶಾ ಕಾರ್ಯಕರ್ತೆಯರಾದ ಮಮತಾ, ಸುಶೀಲಾ, ರಾಜೇಶ್ವರಿ, ಅಶ್ವಿನಿ, ಮಮತಾ ಕೆ.ಜಿ. ಮೇನಕಾ ಸೇರಿದಂತೆ ಆರು ಆಶಾ ಕಾರ್ಯಕರ್ತೆಯರು, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಜಯಕುಮಾರಿ, ಪುರುಷ ಆರೋಗ್ಯ ಸಹಾಯಕ ಗುರುಪ್ರಸಾದ್ ಈ ಜಾಗೃತಿ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದಾರೆ.