ಮಡಿಕೇರಿ, ನ. 29: ಆಂಧ್ರಪ್ರದೇಶದ ತಿರುಪತಿಯಲ್ಲಿ ಇತ್ತೀಚೆಗೆ ಜರುಗಿದ 16 ವರ್ಷದೊಳಗಿನ 17ನೇ ರಾಷ್ಟ್ರೀಯ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಜಿಲ್ಲೆಯ ಮೌರ್ಯ ಗಣಪತಿ ಕಂಚಿನ ಪದಕಗಳಿಸಿದ್ದಾರೆ. ಇವರು ಈ ಸಾಧನೆ ಮೂಲಕ ಕರ್ನಾಟಕ ರಾಜ್ಯ ಕ್ರೀಡಾಕೂಟದಲ್ಲಿ ಮಾಡಿದ ದಾಖಲೆಯನ್ನು ಉತ್ತಮಪಡಿಸಿಕೊಂಡಿದ್ದಾರೆ. ಮೌರ್ಯ ಗಣಪತಿ ಜಿ.ಎಸ್.ಟಿಯ ವೀರಾಜಪೇಟೆಯ ಸೂಪರಿಂಟೆಂಡೆಂಟ್ ಬಲ್ಯಂಡ ದಿನೇಶ್ ಮಾಚಯ್ಯ ಹಾಗೂ ವಿಜಯ್ (ತಾಮನೆ ಉದ್ದಪಂಡ) ದಂಪತಿಯ ಪುತ್ರ.