ಕಣಿವೆ, ನ. 29 : ಕಾವೇರಿ ನದಿ ಹಬ್ಬದ ಅಂಗವಾಗಿ ಕಾವೇರಿ ನದಿಗೆ ಸುತ್ತೂರು ಜಗದ್ಗುರು ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮೀಜಿಯವ ರಿಂದ ಮಹಾ ಆರತಿ ಕಾರ್ಯಕ್ರಮ ಶುಕ್ರವಾರ ಸಂಜೆ ನಡೆಯಿತು. ಈ ಸಂದರ್ಭ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಕಾವೇರಿ ನದಿಗೆ ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಅಗತ್ಯವಿದೆ.

ಪ್ರಕೃತಿ ಯಾವತ್ತು ಯಾರಿಗೂ ಕೆಡುಕು ಉಂಟುಮಾಡುವದಿಲ್ಲ ಮನುಷ್ಯ ಪ್ರಕೃತಿಯ ಮೇಲೆ ಅನಾಹುತ ಮಾಡಹೊರಟಾಗ ಪ್ರಕೃತಿ ಮುನಿಯುತ್ತಾಳೆ. ಆಕೆ ಮುನಿದರೆ ಏನಾಗುತ್ತದೆ ಎಂಬದನ್ನು ನಾವೆಲ್ಲಾ ಅನುಭವಿಸಿದ್ದೇವೆ. ಜ&divound;ರು ಇದರ ಗಂಭೀರತೆ ಹಾಗೂ ದುಷ್ಪರಿಣಾಮ ಗಳನ್ನು ಅರ್ಥಮಾಡಿಕೊಳ್ಳಬೇಕಿದೆ ಎಂದು ಕೊಡಗಿನಲ್ಲಿ ಕಳೆದೆರಡು ವರ್ಷಗಳಿಂದ ಉಂಟಾದ ಪ್ರಕೃತಿಯ ವಿಕೋಪದ ಬಗ್ಗೆ ಶ್ರೀಗಳು ಪ್ರಸ್ತಾಪಿಸಿದರು.

ಕೊಡ್ಲಿಪೇಟೆಯ ಕಿರಿಕೊಡ್ಲಿಮಠದ ಶ್ರೀ ಸದಾಶಿವ ಸ್ವಾಮೀಜಿ, ಅಮ್ಮತ್ತಿ ಕನ್ನಡ ಮಠದ ಶ್ರೀ ಚನ್ನಬಸವ ದೇಶೀಕೇಂದ್ರ ಸ್ವಾಮೀಜಿ, ತೊರೆನೂರಿನ ಶ್ರೀ ಮಲ್ಲೇಶ ಸ್ವಾಮೀಜಿ, ಕೊಡಗು ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಎಚ್.ವಿ.ಶಿವಪ್ಪ, ಪ್ರಮುಖರಾದ ಜೆಮ್ಸಿಪೊನ್ನಪ್ಪ, ಸೂರ್ತಲೆ ಸೋಮಣ್ಣ, ವಿ.ಎನ್.ವಸಂತಕುಮಾರ್, ಹಾಸನ ಜಿಲ್ಲಾ ಕಾವೇರಿ ಸ್ವಚ್ಚತಾ ಆಂದೋಲನದ ಸಂಚಾಲಕ ಕುಮಾರಸ್ವಾಮಿ, ರೀನಾ ಪ್ರಕಾಶ್ ಇದ್ದರು. ಹೆಚ್.ಟಿ. ಅನಿಲ್ ಹಾಗೂ ಸಂಪತ್ ಕುಮಾರ್ ನೇತೃತ್ವದಲ್ಲಿ ಇದೇ ಸಂದರ್ಭ ಹೊರ ತರಲು ಉದ್ದೇಶಿಸಿರುವ ನಮಾಮಿ ಕಾವೇರಿ ಸ್ಮರಣ ಸಂಚಿಕೆಯನ್ನು ಸುತ್ತೂರು ಶ್ರೀಗಳು ಬಿಡುಗಡೆಗೊಳಿಸಿದರು. ಕಾವೇರಿ ಸ್ವಚ್ಛತಾ ಆಂದೋಲನದ ಸಂಚಾಲಕ ಎಂ.ಎನ್. ಚಂದ್ರಮೋಹನ್ ಸ್ವಾಗತಿಸಿ, ವನಿತಾ ಚಂದ್ರಮೋಹನ್ ವಂದಿಸಿದರು.