ಸೋಮವಾರಪೇಟೆ, ನ. 29: ಐಪಿಡಿಎಸ್ ಯೋಜನೆಯಡಿ 33ಕೆವಿ ವಿದ್ಯುತ್ ಮಾರ್ಗದ ವಾಹಕ ಬದಲಾವಣೆ ಕಾಮಗಾರಿಯನ್ನು ನಿರ್ವಹಿಸುತ್ತಿರುವದರಿಂದ ತಾ. 30 ರಂದು (ಇಂದು) 10 ಗಂಟೆಯಿಂದ ಸಂಜೆ 6 ರವರೆಗೆ ಸೋಮವಾರಪೇಟೆ ಪಟ್ಟಣ, ಚೌಡ್ಲು, ಹಾನಗಲ್ಲು, ದೊಡ್ಡಮಳ್ತೆ, ಐಗೂರು, ಅಬ್ಬೂರುಕಟ್ಟೆ, ಶಾಂತಳ್ಳಿ, ಕಿರಗಂದೂರು, ಬೆಟ್ಟದಳ್ಳಿ, ತೋಳೂರುಶೆಟ್ಟಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜು ಇರುವದಿಲ್ಲ ಎಂದು ಸಹಾಯಕ ಕಾರ್ಯನಿರ್ವಹಣಾಧಿಕಾರಿ ತಿಳಿಸಿದ್ದಾರೆ.