ನಾಪೋಕ್ಲು, ನ. 28: ನಾಲ್ಕುನಾಡು ಮುಸ್ಲಿಂ ಜಮಾಅತ್ ಒಕ್ಕೂಟದ ವತಿಯಿಂದ ಡಿಸೆಂಬರ್ 1 ರಂದು ನಾಪೋಕ್ಲುವಿನಲ್ಲಿ ಮಾನವ ಕುಲಕ್ಕೆ ವಿಶ್ವ ಪ್ರವಾದಿಯ ಶಾಂತಿಯ ಸಂದೇಶ ಹಾಗೂ ಸಾರ್ವಜನಿಕ ಸೌಹಾರ್ದ ಸಮ್ಮೇಳನ ನಡೆಯಲಿದೆ. ಬೆಳಿಗ್ಗೆ ಹತ್ತು ಗಂಟೆಯಿಂದ ಪಟ್ಟಣದಲ್ಲಿ ಹಳೆ ತಾಲೂಕಿನಿಂದ ಮಾರುಕಟ್ಟೆ ಆವರಣದವರೆಗೆ ಜಾಥಾ ನಡೆಯಲಿದೆ. ಮಾರುಕಟ್ಟೆ ಆವರಣದಲ್ಲಿ ಮಧ್ಯಾಹ್ನ 1.30ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ.

ನಾಲ್ಕುನಾಡು ಮುಸ್ಲಿಂ ಜಮಾಅತ್ ಒಕ್ಕೂಟದ ಅಧ್ಯಕ್ಷ ಪಿ.ಎಂ. ಖಾಸಿಂ, ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಯಂ.ಸಿ. ನಾಣಯ್ಯ, ಮಲಪುರಂನ ಆರ್ಜಿತ, ಹಿಂದೂ ಸಮಾಜದ ಪರಮಾಚಾರ್ಯ ಡಾ. ಆತ್ಮದಾಸ್ ಯಾಮಿ, ಬೆಂಗಳೂರು ಉಚ್ಚ ನ್ಯಾಯಾಲಯದ ವಕೀಲ ಅನಂತನಾಯಕ್, ಧಾರ್ಮಿಕ ಪಂಡಿತ ಅಬೂಬಕರ್, ಸಿದ್ದಿಕ್ ಮೋಂಟುಗೋಳಿ, ಪತ್ರಕರ್ತ ರಾ. ಚಿಂತನ, ಮಂಗಳೂರಿನ ಧಾರ್ಮಿಕ ಪಂಡಿತ ಅನೀಸ್ ಕೌಸರಿ, ಹಾಗೂ ವೀರಾಜಪೇಟೆ ಕ್ಯಾಥೊಲಿಕ್ ಚರ್ಚ್‍ನ ರೆವರೆಂಡ್ ಫಾದರ್ ಮದಲಿಮುತ್ತು ಪಾಲ್ಗೊಳ್ಳಲಿದ್ದಾರೆ.