ನಾಪೋಕ್ಲು, ನ. 28: ಅಂಜೀಜ್ ಆಯುರ್ವೇದ ಹೆಲ್ತ್‍ಕೇರ್ ಸೆಂಟರ್ ವಯನಾಡು ಮತ್ತು ನಾಪೋಕ್ಲು ಶಾಖೆಯ ಸಂಯುಕ್ತ ಆಶ್ರಯದಲ್ಲಿ ಸಮೀಪದ ಕೊಳಕೇರಿ ಗ್ರಾಮದಲ್ಲಿ ಉಚಿತ ಮೂಳೆ ಚಿಕಿತ್ಸೆ ನಡೆಸಲಾಯಿತು. ಕೊಳಕೇರಿ ಗ್ರಾಮದ ಮದರಸದಲ್ಲಿ ತಜ್ಞ ವೈದ್ಯರು ಉಚಿತ ಮೂಳೆ ಖನಿಜ ಸಾಂದ್ರತೆ ಮತ್ತು ವೈದ್ಯಕೀಯ ಪರಿಶೀಲನಾ ಶಿಬಿರ ನಡೆಸಿದರು. ಶಿಬಿರದಲ್ಲಿ ಗ್ರಾಮದ ನೂರಕ್ಕೂ ಅಧಿಕ ರೋಗಿಗಳ ಪರಿಶೀಲನೆ ನಡೆಸಲಾಯಿತು. ಡಾ, ಅಂಜಿಮೊಹಮದ್, ಡಾ. ಝಾನ್ಸಿ, ಡಾ. ರಂಜು ಈಫನ್ ಪಾಲ್ಗೊಂಡಿದ್ದರು.