ಪೆರಾಜೆ, ನ. 28: ಗ್ರಾಮದ ದೊಡ್ಡಡ್ಕ ಹಾಗೂ ಪೆರಾಜೆ ಗಡಿಗುಡ್ಡೆ ರಸ್ತೆಯ ಬಳಿ ರಾತ್ರಿ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಈ ಭಾಗದ ಜನ ಭಯಬೀತರಾಗಿದ್ದಾರೆ. ಪೆರಾಜೆಯಿಂದ ಗಡಿಗುಡ್ಡೆ ಮಾರ್ಗವಾಗಿ ಬಂಗಾರಕೋಡಿ ಚರಣ ಎಂಬವರು ರಾತ್ರಿ 8.30 ಸುಮಾರಿಗೆ ಬೈಕ್‍ನಲ್ಲಿ ತೆರಳುತ್ತಿದ್ದಾಗ ಶ್ರೀ ಶಾಸ್ತಾವು ದೇವಸ್ಥಾನದ ಚಡಾವಿನಲ್ಲಿ ಅಲ್ಲದೆ ದೊಡ್ಡಡ್ಕ ರಸ್ತೆಯಲ್ಲಿ ಘನಶ್ಯಾಮ ಮತ್ತು ರಾಘವೇಂದ್ರ ಎಂಬವರುಗಳಿಗೆ ಚಿರv ಕಾಣಿಸಿಕೊಂಡಿದೆ. ಸ್ಥಳೀಯರ ಪ್ರಕಾರ ಪೆರಾಜೆಯ ಕೆಂಗಮಟ್ಟೆ ಕಾಡಿನಲ್ಲಿ ಚಿರತೆ ಸೇರಿರಬಹುದು ಎಂದು ಶಂಕಿಸಲಾಗಿದೆ. ಎರಡು ದಿನಗಳ ಹಿಂದೆ ಆಲೆಟ್ಟಿ ಭಾಗದ ಪರಿಸರದಲ್ಲೂ ಜನ ಚಿರತೆಯನ್ನು ಕಂಡಿರುವ ಬಗ್ಗೆ ವರದಿಯಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಕೊಯನಾಡು ಅರಣ್ಯ ಇಲಾಖೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.