ವೀರಾಜಪೇಟೆ, ನ. 28: ದಾನಿಗಳು ಕೊಡುವ ರಕ್ತಕ್ಕೆ ಯಾವದೇ ಜಾತಿ, ಧರ್ಮ, ವರ್ಣದ ಹಂಗಿಲ್ಲ. ಜೀವ ರಕ್ಷಣೆ ಮಾಡುವ ಶಕ್ತಿಯನ್ನು ಇದಕ್ಕೆ ಭಗವಂತ ಕೊಟ್ಟಿದ್ದಾನೆ ಎಂದರೆ ನಾವೆಲ್ಲರೂ ಒಂದೇ ಎಂ¨ ಭಾವನೆಯನ್ನು ತೋರಿಸುತ್ತದೆ ಎಂದು ಅರಮೇರಿ ಕಳಂಚೇರಿ ಮಠಾಧೀಶ ಶಾಂತಮಲ್ಲಿಕಾರ್ಜನ ಸ್ವಾಮೀಜಿ ಹೇಳಿದರು. ವೀರಾಜಪೇಟೆ ಲಯನ್ಸ್ ಕ್ಲಬ್, ಶಿರಾಮೇಗೌಡ ಬಣದ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ಗಾಂಧಿನಗರದ ಲಯನ್ಸ್ ಕ್ಲಬ್ ಕಟ್ಟಡ ಸಂಕೀರ್ಣದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ರಕ್ತದಾನದಿಂದ ಹಲವಾರು ಮಾನವ ಜೀವಗಳು ಹೊಸ ¨ದುಕನ್ನು ಕಂಡುಕೊಳ್ಳುತ್ತವೆ. ರಕ್ತದಾನ ಮಾಡುವದರಿಂದ ಆರೋಗ್ಯ ಕಾಪಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಸಂತ ಅನ್ನಮ್ಮ ಸಂಸ್ಥೆಯ ಧರ್ಮಗುರು ಮದಲೈಮುತ್ತು ಮಾತನಾಡಿ ಜೀವ ನಮಗೆ ದೇವರು ಕೊಟ್ಟ ಉಡುಗೊರೆ. ಒಂದು ಜೀವವನ್ನು ಉಳಿಸಲು ರಕ್ತ ಕೊಡುವವರನ್ನು ದೇವರಿಗೆ ಹೋಲಿಸಬಹುದು. ರಕ್ತ ದಾನಕ್ಕೆ ಹೆಚ್ಚಿನ ಜನರು ಮುಂದೆ ಬರಬೇಕು ಎಂದು ಹೇಳಿದರು.

ಇಲ್ಲಿನ ಆರ್ಜಿ ಗ್ರಾಮದಲ್ಲಿನ ಅನ್ವರುಲ್‍ಹುದಾ ಸಂಸ್ಥೆಯ ಧರ್ಮಗುರು ಮಹಮದ್ ಷಾಫಿ ಮಾತನಾಡಿ ಯಾವದೇ ಫಲಾಪೇಕ್ಷೆ ಹೊಂದದೆ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವದು ನಿಜವಾದ ಸೇವೆ. ದಶಕಗಳ ಹಿಂದೆ ಅನ್ನದಾನ ಶ್ರೇಷ್ಠ ದಾನವಾಗಿದ್ದು ಇಂದು ರಕ್ತದಾನ ಶ್ರೇóಷ್ಠತೆಯನ್ನು ಹೊಂದಿದೆ.. ಮುಕ್ತ ಮನಸ್ಸಿನಿಂದ ರಕ್ತದಾನ ಮಾಡಿದರೆ ದಾನಿಗಳಿಗೆ ಆಪತ್ತು ಕಡಿಮೆ ಎಂದು ಹೇಳಿದರು.

ಜಿಲ್ಲಾ ರಕ್ತನಿಧಿ ಅಧಿಕಾರಿ ಡಾ ಕರುಂಬಯ್ಯ ಮಾತನಾಡಿ ರಕ್ತದಾನವು ಜೀವದಾನವಾಗಿದೆ. 15 ವರ್ಷದಿಂದ 65 ವಯೋಮಿತಿಯವರೆಗೆ ರಕ್ತದಾನ ಮಾಡುವದರಿಂದ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು. ಗಂಡಸರು 3 ತಿಂಗಳಿಗೊಮ್ಮೆ, ಹೆಂಗಸರು 4 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ರಕ್ತ ನೀಡುವದರಿಂದ ನಮ್ಮ ದೇಹದಲ್ಲಿರುವ ಹಳೆ ರಕ್ತ ಹೋಗಿ ಹೊಸ ರಕ್ತ ಉತ್ಪತ್ತಿಯಾಗುತ್ತದೆ. ಶೇಖರಿಸಿದ ರಕ್ತಕ್ಕೆ ಕೇವಲ 35 ದಿನಗಳು ಮಾತ್ರ ಆಯುಷ್ಯ ಇರುತ್ತದೆ. ಒಬ್ಬರು ನೀಡುವ ರಕ್ತ 4 ಜೀವಗಳನ್ನು ಉಳಿಸುತ್ತದೆ.

ಜಿಲ್ಲೆಯಲ್ಲಿ ಕಳೆದ 2 ತಿಂಗಳ ಹಿಂದೆ ರಕ್ತ ವಿದಳನ ಘಟಕ ಪ್ರಾರಂಭಗೊಂಡಿದ್ದು ದಾನಿಗಳು ನೀಡಿದ ರಕ್ತದಲ್ಲಿರುವ ಅಂಶವನ್ನು ಬೇರ್ಪಡಿಸಿ ರೋಗಿಗಳಿಗೆ ನೀಡಲಾಗುವದು ಎಂದು ಹೇಳಿದರು. ಲಯನ್ಸ್ ಕ್ಲಬ್ ಅಧ್ಯಕ್ಷ ಪೌಲ್ ಕ್ಷೇವಿಯಾರ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮೈಸೂರು ಜೀವದಾನ ರಕ್ತನಿದಿ ಕೇಂದ್ರದ ಅಧಿಕಾರಿ ಹೊನ್ನೆಗೌಡ, ಮದು, ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಅನಿಲ್ ಉಪಸ್ಥಿತರಿದ್ದರು. ಇದೇ ಸಂದÀರ್ಭದಲ್ಲಿ ಅತಿ ಹೆಚ್ಚುಬಾರಿ ರಕ್ತದಾನ ಮಾಡಿದ ಇಮ್ರಾನ್, ಇದಾಯಿತುಲಾ, ಎಂ.ಕೆ ರವಿಕುಮಾರ್ ಅವರುಗಳನ್ನು ಸನ್ಮಾನಿಸಲಾಯಿತು.