ಕುಶಾಲನಗರ, ನ. 28: ಕುಶಾಲನಗರದ ಹಿಂದೂ ಜನಜಾಗೃತಿ ಸಮಿತಿ ಹಾಗೂ ಹಿಂದೂಪರ ಸಂಘಟನೆಗಳಿಂದ ಹಿಂದೂ ಜನಜಾಗೃತಿ ಆಂದೋಲನ ಪಟ್ಟಣದ ಗಣಪತಿ ದೇವಾಲಯದ ಮುಂಭಾಗ ನಡೆಯಿತು. ಜಾಗೃತಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಸಮಿತಿಯ ಪ್ರಮುಖ ಶಿವರಾಂ ಮಾತನಾಡಿ, ದೇಶಾದ್ಯಂತ ನಡೆಯುತ್ತಿರುವ ಹಿಂದುತ್ವವಾದಿ ನಾಯಕರ ಹತ್ಯೆ ಹಿಂದೆ ವ್ಯಾಪಕ ಯೋಜನಾಬದ್ಧ ಸಂಚಿದೆ ಎಂದು ಆರೋಪಿಸಿದ ಅವರು, ಹಿಂದೂಗಳ ಮೇಲೆ ಆಗುತ್ತಿರುವ ನಿರಂತರ ದೌರ್ಜನ್ಯ ಹಾಗೂ ಹತ್ಯೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಮತ್ತು ದೇಶದ ನುಸುಳುಕೋರರನ್ನು ಗಡಿಪಾರು ಮಾಡಬೇಕು. ವಿವೇಕಾನಂದರ ಪ್ರತಿಮೆಗೆ ಅಪಮಾನ ಮಾಡಿದ ಜೆಎನ್ಯು ವಿದ್ಯಾರ್ಥಿಗಳ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಹಿಂದೂ ಜನಜಾಗೃತಿ ಸಮಿತಿಯ ಸದಸ್ಯರಾದ ರವಿಚಂದ್ರ, ಸುಮಂತ್, ಪಟ್ಟಣ ಪಂಚಾಯಿತಿ ಸದಸ್ಯ ಅಮೃತರಾಜ್, ಹಿಂದೂಪರ ಸಂಘಟನೆಗಳ ಪ್ರಮುಖರಾದ ನವನೀತ್ ಪೆÇನ್ನೇಟಿ. ಸಂತೋಷ್, ಉಮಾ ಶ್ರೀನಾಥ್, ಶ್ರೀಲಕ್ಷ್ಮಿ ರವಿಚಂದ್ರ ಇನ್ನಿತರರು ಹಾಜರಿದ್ದರು.