ಮಡಿಕೇರಿ, ನ. 27: ನಗರದ ಸಂತ ಜೋಸೆಫರ ಶಾಲೆಯ 110ನೇ ವಾರ್ಷಿಕ ದಿನ ತಾ. 29 ರಂದು ಮಧ್ಯಾಹ್ನ 2 ಗಂಟೆಗೆ ಶಾಲೆಯ ಆವರಣದಲ್ಲಿ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ವೀರಾಜಪೇಟೆಯ ಅರಮೇರಿ ಮಠದ ಶಾಂತಮಲ್ಲಿ ಕಾರ್ಜುನ ಸ್ವಾಮೀಜಿ, ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಜಿ.ಪಂ. ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ನೆಲ್ಲಚಂಡ ಟಿ. ಕಿರಣ್ ಕಾರ್ಯಪ್ಪ, ಡಿ.ಡಿ.ಪಿ.ಯು. ಜಿ. ಕೆಂಚಪ್ಪ, ಡಿ.ಡಿ.ಪಿ.ಐ. ಮಚ್ಚಾಡೋ, ಬಿ.ಇಒ ಟಿ.ಎನ್. ಗಾಯತ್ರಿ ಪಾಲ್ಗೊಳ್ಳಲಿದ್ದಾರೆ.