ಮಡಿಕೇರಿ, ನ. 27: ಸಂಬಾರ ಮಂಡಳಿ ಮಡಿಕೇರಿ ಹಾಗೂ ಭಾರತೀಯ ಸಂಬಾರ ಬೆಳೆಗಳ ಸಂಶೋಧನಾ ಸಂಸ್ಥೆ ಅಪ್ಪಂಗಳ ಇವರ ಸಹಯೋಗದೊಂದಿಗೆ ಏಲಕ್ಕಿ, ಶುಂಠಿ ಮತ್ತು ಕರಿಮೆಣಸು ಬೆಳೆಗಳ ಪ್ರಾದೇಶಿಕ ವಿಚಾರ ಸಂಕಿರಣ ತಾ. 29 ರಂದು ಬೆಳಿಗ್ಗೆ 9.30 ಗಂಟೆಗೆ ಅಪ್ಪಂಗಳದ ಐ.ಸಿ.ಎ.ಆರ್. - ಐ.ಐ.ಎಸ್.ಆರ್. ಪ್ರಾದೇಶಿಕ ಕೇಂದ್ರದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಐ.ಸಿ.ಎ.ಆರ್. - ಐ.ಐ.ಎಸ್.ಆರ್. ಪ್ರಾದೇಶಿಕ ಕೇಂದ್ರದ ಪ್ರಧಾನ ವಿಜ್ಞಾನಿ ಡಾ. ಎಸ್.ಜೆ. ಅಂಕೇಗೌಡ ಉದ್ಘಾಟಿಸಲಿದ್ದಾರೆ.