ಮಡಿಕೇರಿ, ನ. 28: ನಗರದ ಮಹದೇವಪೇಟೆ ನಿವಾಸಿ ವಿಶ್ವಕರ್ಮ ಸಂಘದ ಹಿರಿಯ ಸದಸ್ಯ ಹಾಗೂ ಶ್ರೀ ದುಗಾ ಜ್ಯುವೆಲ್ಲರಿ ಮಾಲೀಕರಾದ ಎಂ.ಟಿ. ಗಣೇಶ್ ಆಚಾರ್ಯ (75) ಅವರು ತಾ. 26 ರಂದು ಮಸ್ಕತ್ (ಓಮನ್)ನಲ್ಲಿರುವ ಮಕ್ಕಳ ಮನೆಗೆ ತೆರಳಿದ್ದ ವೇಳೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಮೃತರು ಪತ್ನಿ, ಮೂವರು ಪುತ್ರರನ್ನು ಅಗಲಿದ್ದಾರೆ.