ಗೋಣಿಕೊಪ್ಪಲು, ನ. 28: ಗೋಣಿಕೊಪ್ಪ ರೋಟರಿ ಕ್ಲಬ್ ವತಿಯಿಂದ ಪಾಲಿಬೆಟ್ಟ ಚಶೈರ್ ಹೋಂನಲ್ಲಿರುವ ವಿದ್ಯಾರ್ಥಿಗಳಿಗೆ ಪ್ರಥಮ ಚಿಕಿತ್ಸಾ ಪೆಟ್ಟಿಗೆಯನ್ನು ನೀಡಲಾಯಿತು. ರೊಟೇರಿಯನ್ ಲತಾಬೋಪಣ್ಣ ಇಲ್ಲಿಯ ಶಿಕ್ಷಕಿಯರಿಗೆ ಹಾಗೂ ಸಹಾಯಕರಿಗೆ ಸೀರೆಗಳನ್ನು ವಿತರಿಸಿದರು. ರೋಟೇರಿಯನ್ ಪ್ರಮೋದ್ ಕಾಮತ್ ವಿದ್ಯಾರ್ಥಿಗಳಿಗೆ ಲೇಖನಿ ಸಾಮಗ್ರಿಗಳನ್ನು ಹಾಗೂ ಸಿಹಿ ವಿತರಿಸಿದರು.
ರೋಟರಿ ಕ್ಲಬ್ನ ಮಹಿಳಾ ಶಾಖೆಯ ಆನ್ಸ್ ಕ್ಲಬ್ ವತಿಯಿಂದ ಉಪಹಾರ ಒದಗಿಸಲಾಯಿತು. ಕಾರ್ಯಕ್ರಮದಲ್ಲಿ ಚಶೈರ್ ಹೋಂನ ಕಾರ್ಯದರ್ಶಿ ಆಶಾ ಸುಬ್ಬಯ್ಯ, ಪ್ರಾಂಶುಪಾಲ ಶಿವರಾಜ್ ಹಾಗೂ ಶಿಕ್ಷಕರು ಭಾಗವಹಿಸಿದ್ದರು. ರೋಟರಿ ಕ್ಲಬ್ನ ಅಧ್ಯಕ್ಷ ಕಾಡ್ಯಮಾಡ ಬಿ. ನೇವಿನ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ನ ಪದಾಧಿಕಾರಿಗಳಾದ ಅಜ್ಜಿಕುಟ್ಟಿರ ಸಜನ್ ಚಂಗಪ್ಪ,ಪ್ರಮೋದ್ ಕಾಮತ್, ಟಿ.ಯು. ನರೇಂದ್ರ, ಕಾವೇರಪ್ಪ, ರೀಟಾ ದೇಚಮ್ಮ,ಜಮುನಾ ತಿಮ್ಮಯ್ಯ, ಆನ್ಸ್ ಕ್ಲಬ್ನ ಸದಸ್ಯರಾದ ಪವಿತ್ರಾ ನೇವಿನ್, ಸುಷ್ಮಾ ಚಂಗಪ್ಪ, ನಿರ್ಮಲ ಕಾವೇರಪ್ಪ, ಸರಿನಾ, ರಾಜೀವ್, ರಾಜೇಶ್ವರಿ ನರೇಂದ್ರ ಮುಂತಾದವರು ಹಾಜರಿದ್ದರು.