ಮಡಿಕೇರಿ, ನ. 28: ಕೂರ್ಗ್ ವೆಲ್‍ನೆಸ್ ಫೌಂಡೇಶನ್ ವತಿಯಿಂದ ನಟ ಮಿಲಿಂಡ್ ಸೋಮನ್ ಅವರ ಸಹಕಾರದೊಂದಿಗೆ ಡಿ. 8 ರಂದು ‘ಜಗತ್ತಿನ ಮೊದಲನೇ ಬರಿಗಾಲು ಓಟ’ದ 5ನೇ ಆವೃತ್ತಿಯ ಸಲುವಾಗಿ ‘ಫುಲ್ ಮ್ಯಾರಥಾನ್’, ಹಾಫ್ ಮ್ಯಾರಥಾನ್’, 10 ಕಿ.ಮೀ. ಓಟ, 5 ಕಿ.ಮೀ. ಓಟ ಹಾಗೂ 1.5 ಕಿ.ಮೀ. ಓಟಗಳ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.

ಪಾಲಿಬೆಟ್ಟದ ಟಾಟಾ ಕಾಫಿ ಸ್ಪೋಟ್ರ್ಸ್ ಮೈದಾನದಿಂದ ಮ್ಯಾರಥಾನ್ ಆರಂಭಗೊಳ್ಳಲಿದ್ದು, ‘ಫುಲ್ ಮ್ಯಾರಥಾನ್’ (42 ಕಿ.ಮೀ.) ವಿಜೇತರಿಗೆ ರೂ. 42,000 ಪ್ರಥಮ ಹಾಗೂ ರೂ. 30,000 ದ್ವಿತೀಯ ನಗದು ಬಹುಮಾನ ನೀಡಲಾಗುವದು. ‘ಹಾಫ್ ಮ್ಯಾರಥಾನ್’ (21 ಕಿ.ಮೀ.) ವಿಜೇತರಿಗೆ ರೂ. 21,000 ಪ್ರಥಮ ಹಾಗೂ ರೂ. 12,000 ದ್ವಿತೀಯ ಬಹುಮಾನ. 10 ಕಿ.ಮೀ. ಓಟದ ವಿಜೇತರಿಗೆ ರೂ. 10,000 ಪ್ರಥಮ, ರೂ. 7,000 ದ್ವಿತೀಯ, 5 ಕಿ.ಮೀ. ಓಟದ ವಿಜೇತರಿಗೆ ರೂ. 5,000 ಪ್ರಥಮ, ರೂ. 2,000 ದ್ವಿತೀಯ ಹಾಗೂ 1.5 ಕಿ.ಮೀ. ಓಟದ ವಿಜೇತರಿಗೆ ಪದಕಗಳನ್ನು ನೀಡಲಾಗುವದು.

ಜಿಲ್ಲೆಯ ಸ್ಪರ್ಧಿಗಳಿಗೆ ಮಾತ್ರ ನಗದು ಬಹುಮಾನ ನೀಡಲಾಗುವದು ಹಾಗೂ ಬರಿಗಾಲಿನಲ್ಲಿ ಓಡಿದವರಿಗೆ ಮಾತ್ರ ನಗದು ಬಹುಮಾನಗಳು ಅನ್ವಯವಾಗುತ್ತದೆ. ಸ್ಪರ್ಧೆಯಲ್ಲಿ ನೋಂದಾಯಿಸಲು ರೂ. 500 ಪಾವತಿಸಬೇಕಾಗಿದ್ದು, ಕನಿಷ್ಟ ವಯಸ್ಸು 8 ಆಗಿರಬೇಕು. ನೋಂದಾಯಿಸಲು ಡಿ. 8 ರಂದು ಬೆಳಿಗ್ಗೆ 5 ಗಂಟೆಗೆ ಟಾಟಾ ಕಾಫಿ ಸ್ಪೋಟ್ರ್ಸ್ ಮೈದಾನದಲ್ಲಿ ಹಾಜರಾಗಬೇಕಿದೆ ಅಥವಾ ಆನ್‍ಲೈನ್ ನೋಂದಣಿ ಲಿಂಕ್ hಣಣಠಿs://ಥಿouಣooಛಿಚಿಟಿಡಿuಟಿ.ಛಿom/ಡಿಚಿಛಿe/?ee=1867 ಮೂಲಕ ಕೂಡ ನೋಂದಣಿ ಮಾಡಬಹುದಾಗಿದೆ. ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಸ್ಪರ್ಧಿಗಳು ತಮ್ಮದೇ ಆದ ನೀರು ಬಾಟಲ್‍ಗಳನ್ನು ತರಬೇಕಾಗಿದೆ ಎಂದು ಕೂರ್ಗ್ ವೆಲ್‍ನೆಸ್ ಫೌಂಡೇಶನ್ ಸಂಘದ ಪ್ರಮುಖರು ತಿಳಿಸಿದ್ದಾರೆ. ಸ್ವಯಂ ಸೇವಕರಾಗಿ ಪಾಲ್ಗೊಳ್ಳಲು ವರುಣ್ ಅವರನ್ನು ಮೊ. 9686855539 ಸಂಪರ್ಕಿಸಬಹುದು.