ಮಡಿಕೇರಿ, ನ. 26: ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾಂದಲಪಟ್ಟಿ ಪ್ರವಾಸಿ ತಾಣಕ್ಕೆ ಹಳದಿ ಫಲಕದ ಜೀಪುಗಳು ಮಾತ್ರ ತೆರಳಲು ಅವಕಾಶ ಕಲ್ಪಿಸಲಾಗಿದೆ. ಬಿಳಿ ಬಣ್ಣದ ಫಲಕ ಹೊಂದಿರುವ ಜೀಪುಗಳನ್ನು ಹಳದಿ ಫಲಕಕ್ಕೆ ಪರಿವರ್ತಿಸಲು ಆರ್‍ಟಿಓ ಅವರು ಅವಕಾಶ ನೀಡುವಂತೆಯೂ ನಿರ್ಧರಿಸಲಾಯಿತು.

ಅಲ್ಲದೆ ವಾಹನಗಳ ನಿಲುಗಡೆ ಶುಲ್ಕವನ್ನು ಮಾಂದಲಪಟ್ಟಿಗೆ ಪ್ರವೇಶಿಸುವ ಸ್ಥಳದಲ್ಲಿ ಒಂದೇ ಕಡೆ ಸಂಗ್ರಹಿಸುವಂತೆಯೂ ಸೂಚಿಸಲಾಯಿತು. ಅಗತ್ಯ ಇರುವ ಕಡೆ ಹಂಪ್‍ಗಳನ್ನು ನಿರ್ಮಿಸುವಂತೆಯೂ, ಸಿಸಿ ಕ್ಯಾಮೆರಾ ಅಳವಡಿಸುವಂತೆಯೂ ನಿರ್ಧಾರ ಕೈಗೊಳ್ಳಲಾಯಿತು. ಸಭೆಯಲ್ಲಿ ಗ್ರಾಮಾಂತರ ಠಾಣಾಧಿಕಾರಿ ಚಂದ್ರಶೇಖರ್ ಮೊದಲಾದ ಅಧಿಕಾರಿಗಳು ಉಪಸ್ಥಿತರಿದ್ದರು.