ಸೋಮವಾರಪೇಟೆ, ನ. 26: ಸಮೀಪದ ಬೆಟ್ಟದಳ್ಳಿ ಶ್ರೀಕುಮಾರಲಿಂಗೇಶ್ವರ ಪ್ರೌಢಶಾಲೆಯ ಅಡುಗೆಕೋಣೆಯ ಬಳಿಯಿದ್ದ ಮಣ್ಣುಮುಕ್ಕ ಹಾವನ್ನು ಪಟ್ಟಣದ ಸ್ನೇಕ್ ರಘು ಅವರು ಸೆರೆ ಹಿಡಿದು ಅರಣ್ಯಕ್ಕೆ ಬಿಟ್ಟರು.
ಶಾಲೆಯ ಆವರಣದಲ್ಲಿದ್ದ ಹಾವನ್ನು ನೋಡಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭಯಭೀತರಾಗಿ ಸ್ನೇಕ್ ರಘು ಅವರಿಗೆ ಮಾಹಿತಿ ನೀಡಿದರು. ನಂತರ ಸ್ಥಳಕ್ಕಾಗಮಿಸಿದ ರಘು ಅವರು ಹಾವನ್ನು ಸೆರೆ ಹಿಡಿದು ಅರಣ್ಯ ಇಲಾಖಾಧಿಕಾರಿಗಳ ಸಮ್ಮುಖದಲ್ಲಿ ಅರಣ್ಯಕ್ಕೆ ಬಿಟ್ಟರು. ಹಾವುಗಳು ಕಂಡುಬಂದರೆ ಅವುಗಳನ್ನು ಕೊಲ್ಲದೇ ತಮಗೆ ಮಾಹಿತಿ ನೀಡಿದರೆ (ಮೊ. 9844558693) ಸುರಕ್ಷಿತವಾಗಿ ಸೆರೆ ಹಿಡಿಯುವದಾಗಿ ರಘು ಅವರು ಪತ್ರಿಕೆ ಮೂಲಕ ಮನವಿ ಮಾಡಿದ್ದಾರೆ.