ವೀರಾಜಪೇಟೆ, ನ. 26: ಅಪರೂಪದ ಬಿಳಿ ಆಮೆಯನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸಿದಾತನನ್ನು ಪೊಲೀಸರು ಬಂಧಿಸಿದ್ದಾರೆ.

ವೀರಾಜಪೇಟೆ ನಗರದ ಹೊರವಲಯದ ಕಾವೇರಿ ಕಾಲೇಜು ಬಳಿ ಬಸ್ ತಂಗುದಾಣದಲ್ಲಿ ವ್ಯಾಪಾರಿಗಳ ಸೋಗಿನಲ್ಲಿ ತೆರಳಿ ಅರೋಪಿಯನ್ನು ಬಂಧಿಸಲಾಗಿದೆ. ಭಾಗಮಂಡಲ ಕೊಪಟ್ಟಿ ಗ್ರಾಮದ ನಿವಾಸಿ ಪಿ. ಮಹೇಶ್ ಬಂಧಿತ ಅರೋಪಿ. ಪ್ರಕರಣದಲ್ಲಿ ಮತ್ತಿಬ್ಬರು ಆರೋಪಿಗಳಾದ ಹಳ್ಳಿಗಟ್ಟು ನಿವಾಸಿಗಳಾದ ಉಮೇಶ್ ಮತ್ತು ರವಿ ಕೃತ್ಯಕ್ಕೆ ಬಳಸಿದ್ದ ಕಾರಿನೊಂದಿಗೆ ಪರಾರಿಯಾಗಿದ್ದಾರೆ.

ಕಾರ್ಯಾಚರಣೆಯಲ್ಲಿ ಸಿಐಡಿ ಅರಣ್ಯ ಸಂಚಾರಿ ಘಟಕದ ಎಸ್‍ಪಿ ಸುರೇಶ್ ಬಾಬು ಅವರ ಮಾರ್ಗದರ್ಶನದಲ್ಲಿ ವೀರಾಜಪೇಟೆ ಅರಣ್ಯ ಸಂಚಾರಿ ದಳ ಸಿಬ್ಬಂದಿಯವರಾದ ಕೆ.ಬಿ. ಸೋಮಣ್ಣ, ಟಿ.ಪಿ. ಮಂಜುನಾಥ್, ಎಂ.ಬಿ. ಗಣೇಶ್, ಪಿ.ಬಿ. ಮೊಣ್ಣಪ್ಪ, ಚಾಲಕ ಸಿ.ಎಂ. ರೇವಪ್ಪ ಪಾಲ್ಗೊಂಟಿದ್ದರು.

-ಕೆ.ಕೆ.ಎಸ್., ವಿರಾಜಪೇಟೆ