ನಾಪೆÇೀಕ್ಲು, ನ. 25: ಕೊಡಗಿನ ಕುಲದೇವರು, ಮಳೆ ದೇವರೆಂದು ಪ್ರಸಿದ್ಧವಾಗಿರುವ ಪಾಡಿ ಶ್ರೀ ಇಗ್ಗುತ್ತಪ್ಪ ದೇವ ಸನ್ನಿಧಿಯಲ್ಲಿ ಹುತ್ತರಿ ಹಬ್ಬದ ದಿನ ಮತ್ತು ಮುಹೂರ್ತವನ್ನು ಶ್ರೀ ಇಗ್ಗುತ್ತಪ್ಪ ದೇವಳದ ಪಾರಂಪರಿಕ ಜ್ಯೋತಿಷಿಯಾದ ಅಮ್ಮಂಗೇರಿ ಕಣಿಯರ ಕುಟುಂಬದ ಶಶಿಕುಮಾರ್ ನಿಶ್ಚಯಿಸಿದರು.

ಅದರಂತೆ ನ. 25ರಂದು ಪುತ್ತರಿ ಹಬ್ಬದ ಪ್ರಯುಕ್ತ ಪಾಡಿ ದೇವಳದಲ್ಲಿ ಡಿ. 10ರಂದು ನಡೆಯುವ ಕಲಾಡ್ಚ ಹಬ್ಬಕ್ಕೆ ಆಧಿ ಸ್ಥಳ ಮಲ್ಮ ಬೆಟ್ಟದಲ್ಲಿ ಪಾಡಿ, ನೆಲಜಿ, ಪೇರೂರು ಇಗ್ಗುತ್ತಪ್ಪ ದೇವಳಗಳ ತಕ್ಕಮುಖ್ಯಸ್ಥರು ಪೂಜಾ ವಿಧಿ ವಿಧಾನಗಳೊಂದಿಗೆ ಕಟ್ಟು ವಿಧಿಸಿದರು. ಇದಕ್ಕೆ ಅನುಗುಣವಾಗಿ ಡಿ. 10 ರ ಮಂಗಳವಾರ ಪಾಡಿ ಶ್ರೀ ಇಗ್ಗುತ್ತಪ್ಪ ದೇವಳದಲ್ಲಿ ಉತ್ಸವ, ದೇವರು ಮಲ್ಮ ಬೆಟ್ಟಕ್ಕೆ ಸಾಗುವದು, ರಾತ್ರಿ ದೇವಳದಲ್ಲಿ ಉತ್ಸವ ಮೂರ್ತಿಯ ನೃತ್ಯ, ಪೂಜೆ ಪುನಸ್ಕಾರ ನಡೆಯಲಿದೆ.

(ಮೊದಲ ಪುಟದಿಂದ) ದೇವ ಪೆÇೀದ್: ಹಬ್ಬದ ಪ್ರಯುಕ್ತ ಡಿ. 11 ರ ಬುಧವಾರದಂದು ರೋಹಿಣಿ ನಕ್ಷತ್ರದಲ್ಲಿ ದೇವಳದಲ್ಲಿ ಕದಿರು ತೆಗೆಯಲು ಮೂಹೂರ್ತ ನಿಶ್ಚಯಿಸಲಾಗಿದೆ. ಅಂದು ರಾತ್ರಿ 7 ಗಂಟೆಗೆ ನೆರೆ ಕಟ್ಟುವದು, 8 ಗಂಟೆಗೆ ಕದಿರು ತೆಗೆಯುವದು ಹಾಗೂ 9 ಗಂಟೆಗೆ ಭೋಜನಕ್ಕೆ ಪ್ರಾಶಸ್ತ್ಯ ಸಮಯವಾಗಿದೆ ಎಂದು ಜೋತಿಷಿಗಳು ತಿಳಿಸಿದ್ದಾರೆ.ನಾಡ್ ಪೆÇೀದ್: ಅದರಂತೆ ನಾಡ್ ಪೆÇೀದ್ ಅಂದರೆ ಸಾರ್ವಜನಿಕವಾಗಿ ಎಲ್ಲಾ ಮನೆಗಳಲ್ಲಿ 7.35ಕ್ಕೆ ನೆರೆ ಕಟ್ಟುವದು, 8.35ಕ್ಕೆ ಕದಿರು ತೆಗೆಯುವದು ಹಾಗೂ 9.35ಕ್ಕೆ ಭೋಜನಕ್ಕೆ ಸರಿಯಾದ ಸಮಯ ಎಂದು ಅವರು ತಿಳಿಸಿದ್ದಾರೆ.

ಈ ಸಂದರ್ಭ ಮಾತನಾಡಿದ ದೇವತಕ್ಕರಾದ ಪರದಂಡ ಡಾಲಿ ಹುತ್ತರಿ ಹಬ್ಬಕ್ಕೆ ನ. 25ರಂದು ಕಟ್ಟು ವಿಧಿಸಲಾಗಿದ್ದು, ಹÅತ್ತರಿ ಹಬ್ಬ ನಡೆಯುವವರೆಗೆ ದೇವಳಕ್ಕೆ ಸಂಬಂಧಿಸಿದ ಎಲ್ಲಾ ತಕ್ಕಮುಖ್ಯಸ್ಥರು, ಭಕ್ತಾದಿಗಳು ಮಧು ಮಾಂಸ, ಶುಭ ಕಾರ್ಯಗಳನ್ನು ನಡೆಸಲು ನಿಷಿದ್ಧವಿದೆ. ಎಲ್ಲರೂ ಇದಕ್ಕೆ ಬದ್ಧರಾಗಿ ನಡೆದುಕೊಳ್ಳುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಚಮಂಡ ಲವ ಚಿಣ್ಣಪ್ಪ, ಭಕ್ತಜನ ಸಂಘದ ಅಧ್ಯಕ್ಷ ಕಾಂಡಂಡ ಜೋಯಪ್ಪ ಸೇರಿದಂತೆ ವ್ಯವಸ್ಥಾಪನಾ ಸಮಿತಿ, ಭಕ್ತಜನ ಸಂಘದ ಎಲ್ಲಾ ಪದಾಧಿಕಾರಿಗಳು, ದೇವಳಕ್ಕೆ ಸಂಬಂಧಿಸಿದ ಎಲ್ಲಾ ತಕ್ಕಮುಖ್ಯಸ್ಥರು, ದೇವಳದ ಪಾರುಪತ್ತೆಗಾರ ಪರದಂಡ ಪ್ರಿನ್ಸ್ ತಮ್ಮಪ್ಪ, ಪ್ರಧಾನ ಅರ್ಚಕ ಕುಶ ಭಟ್, ಕಣಿಯರ ಕುಟುಂಬದ ಹಿರಿಯರಾದ ಕಣಿಯರ ನಾಣಯ್ಯ ಮತ್ತಿತರರು ಇದ್ದರು. -ಪ್ರಭಾಕರ್