ಮಡಿಕೇರಿ, ನ. 25: ಭಾರತ ಜ್ಞಾನಾಭಿವೃದ್ಧಿ ಸಂಸ್ಥೆ ಮತ್ತು ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ, ಬೆಂಗಳೂರು ಸಹಯೋಗದಲ್ಲಿ ನಡೆದ ‘ಅಮರ ಸುಳ್ಯ ಸ್ವಾತಂತ್ರ ಸಮರ-1837’ ರ ಹುತಾತ್ಮ ದಿನಾಚರಣೆಯು ವಿಜೃಂಭಣೆಯಿಂದ ನಡೆಯಿತು.

ಈ ಸಮಾರಂಭವು ಆದಿಚುಂಚನಗಿರಿ ಮಠಾಧಿಪತಿಗಳಾದ ಡಾ. ಶ್ರೀ ನಿರ್ಮಲಾನಂದನಾಥ ಮಹಾ ಸ್ವಾಮೀಜಿ ಅವರ ಆದೇಶ ಮತ್ತು ಆಶೀರ್ವಾದದಿಂದ ನಡೆಯಿತು. ಈ ಪ್ರಯುಕ್ತ ಭಾರತ ಜ್ಞಾನಾಭಿವೃದ್ಧಿ ಸಂಸ್ಥೆ ಮತ್ತು ಕೊಡಗು ದಕ್ಷಿಣ ಕನ್ನಡ ಗೌಡ ಸಮಾಜದ ಸದಸ್ಯರು ಸೇರಿ ಮಹಾ ಸ್ವಾಮೀಜಿಯವರನ್ನು ಭೇಟಿಯಾಗಿ ಗೌರವ ಸೂಚಿಸಿದರು. ಸ್ವಾಮೀಜಿರವರಿಗೆ ಕೊಡಗಿನ ಸಾಂಪ್ರದಾಯಿಕ ಒಡಿಕತ್ತಿಯನ್ನು ತೇನನ ರಾಜೇಶ್ ಸಮರ್ಪಿಸಿದರು.

ಈ ಸಂದರ್ಭ ತಲಕಾಡು ಚಿಕ್ಕರಂಗೇಗೌಡ, ಡಾ. ಪುಟ್ಟ ಸ್ವಾಮಿಗೌಡ, ಗಂಗಹನುಮಯ್ಯ, ಪಾಣತ್ತಲೆ ಪಳಂಗಪ್ಪ, ರವೀಂದ್ರನಾಥ್, ಚೊಕ್ಕಾಡಿ ಅಪ್ಪಯ್ಯ ಹಾಗೂ ಇತರರು ಹಾಜರಿದ್ದರು.