ಕೂಡಿಗೆ, ನ. 24: ಹಾರಂಗಿ ವಸಾಹತು ಕಾಲೋನಿ, ಹುಲುಗುಂದ ಆವರಣದ ಸುತ್ತಮುತ್ತ ಗಿಡಗಂಟಿಗಳು ಬೆಳೆದಿದ್ದು, ಇದರಿಂದ ಕಾಲೋನಿಯ ನಿವಾಸಿಗಳಿಗೆ ಹಾಗೂ ಹುಲುಗುಂದ ಗ್ರಾಮಸ್ಥರಿಗೆ ಓಡಾಡಲು ತೀವ್ರ ತೊಂದರೆಯುಂಟಾಗಿದೆ.

ಇತ್ತೀಚೆಗೆ ಕತ್ತಲಾಗುತ್ತಿದ್ದಂತೆ ಸಮೀಪದ ಅರಣ್ಯದಿಂದ ಕಾಡಾನೆಗಳು ಕೂಡ ಕಾಲೋನಿ ಪ್ರದೇಶಕ್ಕೆ ಲಗ್ಗೆ ಇಡುತ್ತಿದ್ದು, ದಟ್ಟ ಗಿಡಗಂಟಿ ಬೆಳೆದಿರುವ ಕಾರಣದಿಂದ ಆನೆಗಳ ಇರುವಿಕೆ ತಿಳಿಯದೆ ನಿವಾಸಿಗಳು ಸಂಕಷ್ಟಕ್ಕೆ ಸಿಲುಕುವ ಅಪಾಯವಿರುತ್ತದೆ.

ಕಾಲೋನಿಯ ಆವರಣದಲ್ಲಿ ಹಾಗೂ ಸುತ್ತಮುತ್ತ ಬೆಳೆದಿರುವ ಗಿಡಗಂಟಿಗಳನ್ನು ತೆರವುಗೊಳಿಸಿ ನಿವಾಸಿಗಳಿಗೆ ಹಾಗೂ ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸಿಕೊಡುವಂತೆ ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಡಿ. ಭಾಸ್ಕರ್ ನಾಯಕ್ ಹಾಗೂ ಗ್ರಾಮಸ್ಥರು ಹಾರಂಗಿ ಅಣೆಕಟ್ಟೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಮನವಿ ಮಾಡಿದ್ದಾರೆ.