ಪಾಲಿಬೆಟ್ಟ, ನ. 24: ಪಾಲಿಬೆಟ್ಟ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಶಾಸಕ ಕೆ.ಜಿ. ಬೋಪಯ್ಯ ಅವರ ಅನುದಾನದ ಅಡಿಯಲ್ಲಿ ನೂತನ ಕಟ್ಟಡ ನಿರ್ಮಾಣ ಮಾಡಲು ಜಿ.ಪಂ. ಸದಸ್ಯ ಮೂಕೊಂಡ ವಿಜು ಸುಬ್ರಮಣಿ ಭೂಮಿಪೂಜೆ ನೆರವೇರಿಸಿದರು. ಶಾಲಾ ವಿದ್ಯಾರ್ಥಿಗಳಿಗೆ ನೂತನ ಕಟ್ಟಡ ಅತ್ಯವಶ್ಯಕವಾಗಿದ್ದು, ಅಂದಾಜು ರೂ. 10.6 ಲಕ್ಷ ವೆಚ್ಚದಲ್ಲಿ ನೂತನ ಕಟ್ಟಡ ಪ್ರಾರಂಭವಾಗಲಿದ್ದು, ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದರು. ಈ ಸಂದರ್ಭ ಪಾಲಿಬೆಟ್ಟ ಗ್ರಾ.ಪಂ. ಸದಸ್ಯ ದೀಪಕ್ ಗಣಪತಿ, ಹೊಸೂರು ಗ್ರಾ.ಪಂ. ಸದಸ್ಯ ನರಸಿಂಹ, ಶಾಲಾ ಮುಖ್ಯ ಶಿಕ್ಷಕಿ ವಿಮಲಾ, ಕ್ಲಸ್ಟರ್ ಅಧಿಕಾರಿ ಕರುಂಬಯ್ಯ, ಪ್ರಮುಖರಾದ ವಸಂತ್, ನವೀನ್, ಈಶ್ವರ್ ಮತ್ತಿತರರು ಇದ್ದರು.