ಸೋಮವಾರಪೇಟೆ, ನ. 24: 12ನೇ ವರ್ಷಕ್ಕೊಮ್ಮೆ ನಡೆಯುವ ಕೂತಿನಾಡು ಸಬ್ಬಮ್ಮ ದೇವರ ಪೂಜಾ ಕಾರ್ಯಕ್ರಮ ಡಿ. 8 ರಂದು ಆಯೋಜಿಸಲಾಗಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಜೋಯಪ್ಪ ತಿಳಿಸಿದ್ದಾರೆ.

ಕೂತಿನಾಡು ಯಡದಂಟೆ, ಕುಂದಳ್ಳಿ, ನಗರಳ್ಳಿ, ಹೆಮ್ಮನಗದ್ದೆ, ಕನ್ನಳ್ಳಿ, ಬೆಟ್ಟದಳ್ಳಿ, ಜಕ್ಕನಳ್ಳಿ, ಬೆಟ್ಟದಕೊಪ್ಪ, ಹಳ್ಳಿಯೂರು, ಕೊತ್ತನಳ್ಳಿ, ಇನಕನಳ್ಳಿ, ಬೆಂಕಳ್ಳಿ, ಕುಡಿಗಾಣ ಸೇರಿದಂತೆ 19 ಊರಿನವರು, ಅನಾದಿಕಾಲದಿಂದಲೂ ಬೇಕನಳ್ಳಿ ಗ್ರಾಮದಲ್ಲಿ ನೆಲೆಸಿರುವ ಸಬ್ಬಮ್ಮ ದೇವರ ಪೂಜಾ ಕಾರ್ಯ ನೆರವೇರಿಸಿಕೊಂಡು ಬರುತ್ತಿದ್ದು, ಡಿ. 8 ರಂದು ಬೆಳಿಗ್ಗೆ 4 ಗಂಟೆಗೆ ಗಣಪತಿ ಹೋಮ, 8ಕ್ಕೆ ಪೂರ್ಣಕುಂಭ ಮೆರವಣಿಗೆ ನಡೆಯಲಿದೆ ಎಂದು ಜೋಯಪ್ಪ ತಿಳಿಸಿದ್ದಾರೆ.