ಚೆಟ್ಟಳ್ಳಿ, ನ. 24: ಜಿಲ್ಲಾ ಕಾರ್ಮಿಕ ಅಧಿಕಾರಿಗಳಿಗೆ, ಕಾರ್ಮಿಕ ಸಂಘಟನೆಯಿಂದ ಬಂದ ದೂರಿನ ಮೇರೆಗೆ ಜಿಲ್ಲಾ ಕಾರ್ಮಿಕ ಅಧಿಕಾರಿಗಳು ವೀರಾಜಪೇಟೆ ತಾಲೂಕಿನ ಪೊನ್ನಂಪೇಟೆ ಹೋಬಳಿಯ ಬೆಕ್ಕೆಸೊಡ್ಲೂರು ಗ್ರಾಮದ ವ್ಯಾಪ್ತಿಯಲ್ಲಿ ಕಾವೇರಪ್ಪ ಅವರ ಕಾಫಿ ತೋಟದ ಲೈನ್ ಮನೆಯಲ್ಲಿ ವಾಸವಿದ್ದ 6 ಜನ ಕಾರ್ಮಿಕರು ಮತ್ತು ಕುಟುಂಬದ ಸದಸ್ಯರನ್ನು ಕಾರ್ಮಿಕರ ಇಚ್ಛೆಯಂತೆ ಮಾಲೀಕರು ಮತ್ತು ಕಾರ್ಮಿಕರ ನಡುವೆ ಸಂಧಾನ ಏರ್ಪಡಿಸಿ ಲೈನ್ ಮನೆಯಿಂದ ಕಾರ್ಮಿಕರ ಸ್ವಂತ ಮನೆಗಳಿಗೆ ಕಳುಹಿಸಿ ಕೊಡಲಾಯಿತು.
ಈ ಸಂದರ್ಭದಲ್ಲಿ ಹಿರಿಯ ಕಾರ್ಮಿಕ ಅಧಿಕಾರಿ ಎಂ. ಮಹದೇವ ಸ್ವಾಮಿ, ವೀರಾಜಪೇಟೆ ಹಿರಿಯ ಕಾರ್ಮಿಕ ನಿರೀಕ್ಷಕ ಎಂ.ಎಂ. ಯತ್ನಟಿ, ಮಡಿಕೇರಿ, ಪೊನ್ನಂಪೇಟೆ ಹೋಬಳಿಯ ಕಂದಾಯ ಪರಿವೀಕ್ಷಕ ಸಿ.ಯು. ರಾಧಕೃಷ್ಟ, ಬೆಕ್ಕೆಸೊಡ್ಲೂರು ಗ್ರಾಮ ಲೆಕ್ಕಿಗ ಎನ್. ಪೂರ್ಣಿಮಾ, ಹರೀಶ್, ನಾಗರಾಜ್ ಇದ್ದರು.
 
						