ಸುಂಟಿಕೊಪ್ಪ, ನ. 24: ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಭಾಷೆ ರಸಪ್ರಶ್ನೆ ಕಾರ್ಯಕ್ರಮ ಕಾಲೇಜಿನ ಪ್ರಾಂಶುಪಾಲ ಪಿ.ಎಸ್. ಜಾನ್ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಮೈಸೂರು ಶೇಷಾದ್ರಿ ಪುರಂ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕಿ ಲಾವಣ್ಯ ಮಾತನಾಡಿ, 2000 ªರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆ ಇಂದು ಅಳಿವಿನಂಚಿನಲ್ಲಿರುವದು ವಿಷಾದನೀಯ ಸಂಗತಿಯಾಗಿದೆ. ಒಂದು ಬಾಷೆ ಮರೆಯಾದರೆ ಒಂದು ಸಂಸ್ಕøತಿ ನಾಶವಾದಂತೆಯೇ ಸರಿ. ಆ ನಿಟ್ಟಿನಲ್ಲಿ ನಮ್ಮ ಭಾಷೆ ನಮ್ಮ ಸಂಸ್ಕøತಿ ನಾಶವಾಗದಂತೆ ಎಚ್ಚರ ವಹಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಪಿ.ಎಸ್. ಜಾನ್ ಮಾತೃ ಭಾಷೆಗೆ ಸಮಾನವಾದ ನುಡಿಯಲ್ಲಿ ಮಾತೃಭೂವಿಗೆ ಸಮಾನಾದ ಸ್ವರ್ಗವಿಲ್ಲ ಎಂಬ ಘೋಷ ವಾಕ್ಯವು ಮಾತೃ ಭಾಷೆಯ ಮಹತ್ವವನ್ನು ತಿಳಿ ಹೇಳುತ್ತದೆ. ಇಂದು ಪೋಷಕರು ಆಂಗ್ಲ ಭಾಷೆಯ ವ್ಯಾಮೋಹದಿಂದ ಕನ್ನಡ ಮಾಧ್ಯಮದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡಿಸುವದಕ್ಕೆ ಮುಂದಾಗಿರುವದು ದು:ಖಕರ ಸಂಗತಿಯಾಗಿದೆ ಎಂದರು. ವಿದ್ಯಾರ್ಥಿಗಳಿಗೆ ಸ್ಪರ್ಧಾ ಚಟುವಟಿಕೆಯಾಗಿ ಕನ್ನಡ ಭಾಷೆಗೆ ಸಂಬಂದಿಸಿದ ರಸ ಪ್ರಶ್ನೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಸಂದರ್ಭ ಉಪನ್ಯಾಸಕರಾದ ಪಿ.ಸೋಮಚಂದ್ರ, ಬೆಳ್ಳಿಯಪ್ಪ ಎಸ್.ಹೆಚ್.ಈಶ, ಫಿಲಿಫ್ವಾಸ್, ಉಪನ್ಯಾಸಕಿಯರಾದ ಕೆ.ಕವಿತಾಭಕ್ತ್, ಪದ್ಮಾವತಿ, ಜಯಶ್ರೀ, ಮಂಜುಳಾ, ಕಾವ್ಯ, ಕವಿತ, ಕನಕ, ವಿದ್ಯಾರ್ಥಿಗಳು ಹಾಜರಿದ್ದರು
 
						