ಸಿದ್ದಾಪುರ, ನ. 23: ನೆಲ್ಲಿಹುದಿಕೇರಿಯ ನಿವಾಸಿ ಹಾಗೂ ಮೈಸೂರಿನಲ್ಲಿ ಚರ್ಚ್‍ನ ಧರ್ಮಗುರುಗಳಾಗಿದ್ದ ರೆ.ಫಾದರ್ ಕ್ರಿಸ್ಟಿ ಶ್ಯಾಂ (70) ಅವರು 23 ರಂದು ನಿಧನರಾದರು. ಮೃತರು ಕೊಡಗು ಜಿಲ್ಲೆಯ ಪಾಲಿಬೆಟ್ಟ, ಕುಶಾಲನಗರ, ಸುಂಟಿಕೊಪ್ಪ ಹೊರ ಜಿಲ್ಲೆಯ, ಹುಣಸೂರು, ಮೈಸೂರು, ಚಾಮರಾಜನಗರದ ವಿವಿಧ ಚರ್ಚ್‍ಗಳಲ್ಲಿ ಧರ್ಮಗುರುಗಳಾಗಿ ಹಾಗೂ ಸಮಾಜ ಸೇವೆಯಲ್ಲಿ ವಿವಿಧ ಸಂಘಟನೆಗಳಲ್ಲಿ ಸೇವೆ ಸಲ್ಲಿಸಿದ್ದರು. ಮೃತದೇಹವನ್ನು ಮೈಸೂರು ಸೇಂಟ್ ಮೇರಿಸ್ ಸೆಮಿನರಿಯಲ್ಲಿ (ಕ್ಯಾಥೋಲಿಕ್ ಸೆಂಟರ್) ಇರಿಸಲಾಗಿದೆ. ತಾ. 25 ರಂದು ಬೆಳಿಗ್ಗೆ 10.30ಕ್ಕೆ ಬಲಿ ಪೂಜೆಯ ನಂತರ ಸಂತ ಜೋಸೆಫ್ ಕ್ಯಾಥಡ್ರಲ್ ಚರ್ಚ್‍ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರ ಸಹೋದರ ಕೆ.ಪಿ.ಸಿ.ಸಿ ಸದಸ್ಯರಾದ ಜೋಸೆಫ್ ಶ್ಯಾಂ ತಿಳಿಸಿದ್ದಾರೆ.