ಮಡಿಕೇರಿ, ನ. 22: ಕೋಟೆ ಆವರಣದಲ್ಲಿ ಆಯೋಜಿಸಿದ್ದ ವಿಶ್ವ ಪರಂಪರಾ ಸಪ್ತಾಹ-2019ರ ಅಂಗವಾಗಿ ಮಡಿಕೇರಿ ಸರಕಾರಿವಸ್ತು ಸಂಗ್ರಹಾಲಯ, ಕೋಟೆ ಆವರಣ ಕಚೇರಿಯಲ್ಲಿ ಪ್ರಾಚೀನ ನಾಣ್ಯ ನೋಟುಗಳ ಪ್ರದರ್ಶನ ಹಾಗೂ ಕೊಡಗಿನ ಐತಿಹಾಸಿಕ ಪಾರಂಪರಿಕ ಕಟ್ಟಡಗಳ ಛಾಯಾಚಿತ್ರ ಪ್ರದರ್ಶನವು ವೀಕ್ಷಕರನ್ನು ಇಂದಿನ ಡಿಜಿಟಲ್ ಯುಗದಿಂದ ಶತಮಾನಗಳ ಹಿಂದಿನ ಯುಗಕ್ಕೆ ಸಾಗಿಸಿತಲ್ಲದೆ ಬೆಳೆಯುತ್ತಿರುವ ನಗರೀಕರಣ, ಡಿಜಿಟಲೀಕರಣ ಹಾಗೂ ಅಭಿವೃದ್ಧೀಕರಣದತ್ತ ಕಣ್ತೆÉರೆಯುವಂತೆ ಮಾಡಿತು. 1730 ರ ಕೊಡಗಿನ ವೈಭವದ ಕೋಟೆ, 1880ರ ಕೊಡಗಿನ ಬಜಾರ್ ನೋಟ, (ಮೊದಲ ಪುಟದಿಂದ) 1830 ಇಸವಿಯ ಓಂಕಾರೇಶ್ವರ ದೇವಸ್ಥಾನಗಳ ಛಾಯಾಚಿತ್ರಗಳು ಕೊಡಗಿನ ಮಹಿಮೆ ಬಗ್ಗೆ ಸಾರಿ ಹೇಳಿದವಲ್ಲದೆ ನಗರೀಕರಣದತ್ತ ಕೊಡಗಿನ ವೇಗದ ಪಯಣವನ್ನು ಬಿಚ್ಚಿಟ್ಟವು.

ಇನ್ನು, ಸಂಗ್ರಹಾಲಯದಲ್ಲಿ ಪುರಾತನ ಕಾಲದ ನಾಣ್ಯಗಳ ಸದ್ದು ಮಧುರಕರವಾಗಿದ್ದವು. ಕ್ರಿಸ್ತ ಪೂರ್ವದ ನಾಣ್ಯಗಳಿಂದ ಆರಂಭಿಸಿ 2016ರಲ್ಲಿ ರದ್ದಾದ ಅನುಕ್ರಮ (ಸರಣಿ) ನೋಟುಗಳು ವೀಕ್ಷಕರನ್ನು ವಿಸ್ಮಯಿಸಿದವು. ಸಂಗ್ರಹಾಲಯ ತುಂಬುವಷ್ಟು ಸಂಗ್ರಹಗಳನ್ನು ಕೇಶವ ಮೂರ್ತಿ ನಿಖರವಾಗಿ ಸಂಗ್ರಹಿಸಿದ್ದಾರೆ.

‘1985ರಲ್ಲಿ ನಾನು ಮಡಿಕೇರಿಗೆ ಬಿಎಸ್‍ಎನ್‍ಎಲ್ ಉದ್ಯೋಗಿಯಾಗಿ ಬಂದೆ. ಆಗ ನಾನು ಅಂZ Éಚೀಟಿಗಳನ್ನು ಸಂಗ್ರಹಿಸುತ್ತಿದ್ದೆನಾದರೂ ಅವುಗಳು ಕೊಡಗಿನ ತಾಪಮಾನದಲ್ಲಿ ಉಳಿಯುತ್ತಿರಲಿಲ್ಲ. ನಂತರ ನಾನು ನಾಣ್ಯಗಳನ್ನು ಸಂಗ್ರಹಿಸಲು ಪ್ರಾರಂಭಿಸಿದೆ. ನನ್ನ ಸ್ನೇಹಿತರಾದ ಡಾ. ಪಾಟ್ಕರ್, ಎನ್ ಜಿ ವಾಸುದೇವ, ನಾರಾಯಣ ಭಟ್, ವಸಂತ್ ಹಾಗೂ ಮಹಲಿಂಗೇಶ್ವರ್ ಭಟ್ ನನಗೆ ‘ಸಾಥ್’ ನೀಡುತ್ತಿದ್ದರು. ಹೀಗೆ ಪ್ರಾರಂಭವಾದ ಆಸಕ್ತಿ ಬೆಳೆದು ಈಗ ನಾನು 147 ನೇ ನಾಣ್ಯಪ್ರದರ್ಶನದಲ್ಲಿ ಭಾಗಿಯಾಗಿದ್ದೇನೆ,’ ಎಂದು ಕೇಶವ್ ತಿಳಿಸುತ್ತಾರೆ.

ಮೈಸೂರು ಒಡೆಯರ್, ಹೊಯ್ಸಳ, ಬಹಮನಿ, ಟಿಪ್ಪು ಸುಲ್ತಾನರ ಕಾಲದ ನಾಣ್ಯಗಳು ಸೇರಿದಂತೆ ಬ್ರಿಟೀಷ್ ಹಾಗು ವಿದೇಶಿಯರ ಪುರಾತನ ನಾಣ್ಯಗಳು ಸಂಗ್ರಹಾಲಯದಲ್ಲಿ ಕಂಗೊಳಿಸಿದವು. ಇನ್ನು, ಕೊಡಗಿನ ಒಂದೇ ಒಂದು ನಾಣ್ಯ 0.34 ಗ್ರಾಂ ಚಿನ್ನದ ನಾಣ್ಯವಾದ ವೀರರಾಯ ಫÀನಾಮ ಅಥವ ಕೂರ್ಗ್ ಫÀನಾಮ ವೀಕ್ಷಕರ ಮನ ಸೆಳೆಯಿತು. ‘ನಾನು ಹಲವಾರು ಪುರಾತನ ಗ್ರಂಥಗಳನ್ನು ಶೋಧಿಸಿರುವೆ. ಅವುಗಳಲ್ಲೆÉಲ್ಲಿಯೂ ಕೊಡಗಿನಲ್ಲಿ ಕೊಡಗಿನ ರಾಜರಿಂದ ಪ್ರಕಟಗೊಂಡ ನಾಣ್ಯಗಳ ಮಾಹಿತಿಯೇ ಇಲ್ಲ. ಹೀಗಿದ್ದರೂ ‘ಕೂರ್ಗ್ ಫನಾಮ’ ಅಥವ ‘ವೀರರಾಯ ಫನಾÀಮ’ ಹೆಚ್ಚಾಗಿ ಕೊಡಗಿನಲ್ಲಿ ಬಳಕೆಯಲ್ಲಿತ್ತು,’ ಎಂದು ಕೇಶವ್ ತಿಳಿಸುತ್ತಾರೆ.

ಈ ‘ಕೂರ್ಗ್ ಫನಾಮ ಹಾಗೂ ಮೈಸೂರು ಒಡೆಯರ್ ಕಾಲದ 20 ಕನ್ನಡ ಸಂಖ್ಯೆಗಳ ನಾಣ್ಯಗಳನ್ನು ಕೇಶವ್ ಮಡಿಕೇರಿ ಸಂಗ್ರಹಾಲಯಕ್ಕೆ ಉಡುಗೊರೆಯಾಗಿ ನೀಡಿದ್ದಾರೆ. ‘ನಾಣ್ಯ ಸಂಗ್ರಹಣೆ ನನ್ನ ಭಾವನಾತ್ಮಕ ಹವ್ಯಾಸ. ಇದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನಾಣ್ಯಗಳನ್ನು ಸಂಗ್ರಹಿಸುವದಲ್ಲದೆ ನಾನು ಅವುಗಳ ಬಗ್ಗೆ ಅಧ್ಯಯನವನ್ನೂ ಮಾಡುತ್ತೇನೆ,’ ಎಂದು ಕೇಶವ್ ತಿಳಿಸುತ್ತಾರೆ.

ಮಡಿಕೇರಿ ಸಕಾರ್Àರಿ ವಸ್ತು ಸಂಗ್ರಹಾಲಯದ ಕ್ಯುರೇಟರ್À ರೇಖಾ ಈ ಪ್ರದರ್ಶನದ ಜವಾಬ್ದಾರಿ ಹೊತ್ತಿದ್ದು ಈ ಪ್ರದರ್ಶನವು 24ರ ವರೆಗೆ ತೆರೆದಿರಲಿದೆ ಎಂದು ಮಾಹಿತಿ ನೀಡಿದರು.

ಪ್ರಾಚೀನ ನಾಣ್ಯ ಮತ್ತು ನೋಟುಗಳ ಪ್ರದರ್ಶನದಲ್ಲಿ ಕ್ರಿಸ್ತ ಪೂರ್ವ 5ನೇ ಶತಮಾನದಲ್ಲಿ ಬಳಕೆಗೆ ಬಂದ ಭಾರತದ ಮೊಟ್ಟ ಮೊದಲ ಪಂಚ್ ಮಾರ್ಕ್ ನಾಣ್ಯಗಳು, ಗ್ರೀಕ್, ರೋಮನ್, ಕುಶಾನರು, ಗುಪ್ತ ನಾಣ್ಯಗಳು, ಶಾತವಾಹನರು, ಕದಂಬ, ಚೋಳ, ಪಾಂಡ್ಯ ಮುಂತಾದ ಪ್ರಾಚೀನ ಭಾರತದ ನಾಣ್ಯಗಳು, ಮೊಘಲ್ ಸಾಮ್ರಾಜ್ಯದ ಅಕ್ಬರ್, ಜಹಾಂಗೀರ್, ಷಹಜಹಾನ್, ಔರಂಗಜೇಬ್‍ರ ನಾಣ್ಯಗಳು, ವಿಜಯನಗರ ಸಾಮ್ರಾಜ್ಯದ ಕೃಷúದೇವರಾಯ, ಅಚ್ಚುತರಾಯ, ಪ್ರತಾಪ ದೇವರಾಯರ ನಾಣ್ಯಗಳು, ಮೈಸೂರು, ಬಿಜಾಪುರ ತಿರುವಾಂಕೂರು, ಹೈದರಾಬಾದ್, ಕಛ್, ಬರೋಡ, ಗ್ವಾಲಿಯರ್, ಮೇವಾರ ಮುಂತಾದ ಭಾರತೀಯ ರಾಜ್ಯ ಸಂಸ್ಥಾನಗಳ ನಾಣ್ಯಗಳು, ಸ್ವಾತಂತ್ರ್ಯ ಪೂರ್ವದ ಬ್ರಿಟೀಷ್, ಪೋರ್ಚ್‍ಗೀಸರ ಮತ್ತು ಸ್ವಾತಂತ್ರ್ಯ ಭಾರತದ ನಾಣ್ಯ, ನೋಟುಗಳು, ಸ್ಮರಣಾರ್ಥ ಬಿಡುಗಡೆಯಾದ 100, 50, 20, 10 ರೂ.ಗಳ ನಾಣ್ಯಗಳು, ಚಲಾವಣೆಯಿಂದ ಹಿಂತೆಗೆದುಕೊಂಡ ಸಾವಿರ ರೂಪಾಯಿ ನೋಟುಗಳು, ನೂರಾರು ದೇಶ-ವಿದೇಶಗಳ ನಾಣ್ಯಗಳು, ತಾಮ್ರ, ಚಿನ್ನ, ಬೆಳ್ಳಿ, ಸೀಸ ಹಾಗೂ ಹಿತ್ತಾಳೆ ಮುಂತಾದ ಲೋಹಗಳ ನಾಣ್ಯಗಳು, ನೂರಾರು ದೇಶ-ವಿದೇಶದಿಂದ ಮಾಡಿದ ನೋಟುಗಳು, ಇತ್ತೀಚಿನ ಪ್ಲಾಸ್ಟಿಕ್ ನೋಟುಗಳು, ನೂರಾರು ವರ್ಷಗಳ ಹಿಂದಿನ ಛಾಪಾ ಕಾಗದಗಳು ಮತ್ತಿತರವನ್ನು ವೀಕ್ಷಿಸಬಹುದಾಗಿದೆ.

ಕ್ರಿ.ಶ.1730 ರಿಂದ ಕ್ರಿ.ಶ.1907 ಕಾಲಕ್ಕೆ ಸೇರಿದ ಕೊಡಗು ಜಿಲ್ಲೆಯ ವಿವಿಧ ಐತಿಹಾಸಿಕ ಹಾಗೂ ಪಾರಂಪರಿಕ ಸ್ಥಳಗಳು ಮತ್ತು ಕಟ್ಟಡಗಳ ಛಾಯಾಚತ್ರಗಳು ಪ್ರದರ್ಶನಕ್ಕೆ ಮೆರುಗು ನೀಡಿದವು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪನ್ನೇಕರ್ ನಾಣ್ಯಗಳ ಪ್ರದರ್ಶನಗಳಿಗೆ ಶುಕ್ರವಾರ ಚಾಲನೆ ನೀಡಿದರು. ಛಾಯಾಚಿತ್ರಗಳ ಪ್ರದರ್ಶನವನ್ನು ಡಾ.ಎಂ.ಜಿ. ಪಾಟ್ಕರ್ ಉದ್ಘಾಟಿಸಿದರು.. ಡಾ.ಜಯಲಕ್ಷ್ಮಿ ಪಾಟ್ಕರ್ ಪಾಲ್ಗೊಂಡಿದ್ದರು.