ಸೋಮವಾರಪೇಟೆ, ನ. 22: ಇಲ್ಲಿನ ಒಕ್ಕಲಿಗರ ಪ್ರಗತಿಪರ ಮಹಿಳಾ ವೇದಿಕೆ ವತಿಯಿಂದ ಜನಾಂಗೀಯ ದಿನವನ್ನು ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ಆಚರಿಸಲಾಯಿತು.

ಕಾರ್ಯಕ್ರಮವನ್ನು ವೇದಿಕೆಯ ಅಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಉದ್ಘಾಟಿಸಿದರು. ಕಾರ್ಯಕ್ರಮದ ಅಂಗವಾಗಿ ಜನಾಂಗೀಯ ಉಡುಗೆಯ ಸ್ಪರ್ಧೆ ಏರ್ಪಡಿಸಲಾಗಿತ್ತು. 17 ಮಂದಿ ಮಹಿಳೆಯರು ವಿವಿಧ ರಾಜ್ಯಗಳ ಉಡುಗೆಗಳನ್ನು ಧರಿಸಿ, ಗಮನ ಸೆಳೆದರು.

ಆದಿವಾಸಿ ಮಹಿಳೆಯ ಉಡುಗೆ ಧರಿಸಿ, ನೃತ್ಯ ಮಾಡಿದ ಚಂದ್ರ ಬಿದ್ದಪ್ಪ ಗಮನ ಸೆಳೆದರು.

ಒಕ್ಕಲಿಗ ಜನಾಂಗದ ಮಧುಮಗಳ ಉಡುಪು ಧರಿಸಿದ್ದ ಸಿಂಪಲ್ ಅಶೋಕ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದರು. ಮಹಾರಾಷ್ಟ್ರ ಮಹಿಳೆಯ ಉಡುಪಿನ ಅಶ್ವಿನಿ ಕೃಷ್ಣಕಾಂತ್ ದ್ವಿತೀಯ, ಒಕ್ಕಲಿಗರ ಅಜ್ಜಿಯಾಗಿದ್ದ ಚಂದ್ರಕಲಾ ಸುರೇಶ್, ರಾಜಸ್ತಾನಿ ಮಧುಮಗಳಾಗಿದ್ದ ಉಷಾಕೃಷ್ಣ ತೃತೀಯ ಸ್ಥಾನ ಗಳಿಸಿದರು.

ಕಾರ್ಯಕ್ರಮದಲ್ಲಿ ವೇದಿಕೆಯ ಉಪಾಧ್ಯಕ್ಷೆ ಚಂದ್ರಿಕಾ ಕುಮಾರ್, ಕಾರ್ಯದರ್ಶಿ ಸಂಗೀತಾ ದಿನೇಶ್, ಖಜಾಂಚಿ ಲಾವಣ್ಯ ಮೋಹನ್, ಕುವೆಂಪು ಪೂರ್ವ ಪ್ರಾಥಮಿಕ ಶಾಲೆಯ ಬಾತ್ಮೀದಾರರಾದ ಕವಿತಾ ವಿರೂಪಾಕ್ಷ ಇದ್ದರು. ನಮಿತಾ ರತ್ನಾಕರ ರೈ, ಅನಿತಾ ಪೂವಯ್ಯ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು.