ಭಾಗಮಂಡಲ, ನ. 22: ಪೂನೆಯಲ್ಲಿ ನೆಲೆಸಿರುವ ಭಾಗಮಂಡಲ ಮೂಲದ ವೈದ್ಯ ಡಾ. ಮೇಜರ್ ಕುಶ್ವಂತ್ ಕೋಳಿಬೈಲು ಸಾರಥ್ಯದಲ್ಲಿ ಮಕ್ಕಳ ಆರೋಗ್ಯ ತಪಾಸಣೆ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆಯಿತು.
ಶಿಬಿರದಲ್ಲಿ ಭಾಗಮಂಡಲ ವ್ಯಾಪ್ತಿಯ ಗ್ರಾಮಗಳ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಮಕ್ಕಳನ್ನು ಕರೆತಂದಿದ್ದರು. 150ಕ್ಕೂ ಹೆಚ್ಚು ಮಕ್ಕಳ ಆರೋಗ್ಯ ತಪಾಸಣೆ ನಡೆಸಿ ಆರೋಗ್ಯ ಸಮಸ್ಯೆ ಇರುವವರಿಗೆ ಉಚಿತವಾಗಿ ಔಷಧಿಯನ್ನು ವಿತರಿಸಲಾಯಿತು.
‘ನನ್ನ ತೃಪ್ತಿಗಾಗಿ ನಾನು ಈ ಕಾರ್ಯ ಮಾಡಿದ್ದೇನೆ. ಯಾವದೇ ಪ್ರಚಾರಕ್ಕಾಗಿ ಅಲ್ಲ. ನಾನು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚು ಸ್ಪಂದನ ಸಿಕ್ಕಿದೆ. ಬೆಳಿಗ್ಗೆಯಿಂದ ಸಂಜೆಯವರೆಗೆ ಬಿಡುವಿಲ್ಲದೆ ಮಕ್ಕಳ ತಪಾಸಣೆ ಮಾಡಿದ್ದು ಖುಷಿಯಾಗಿದೆ. ಮುಂದೆಯೂ ಕೂಡಾ ವಿವಿಧ ಸಮಸ್ಯೆಗಳ ಬಗ್ಗೆ ಕ್ಯಾಂಪ್ ಮಾಡಬೇಕೆಂದಿದ್ದೇನೆ’ ಎಂದು ಕುಶ್ವಂತ್ ತಿಳಿಸಿದರು.