ಮಡಿಕೇರಿ, ನ. 22: ಪ್ರಸಕ್ತ ಸಾಲಿನ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕ (6-8ನೇ ತರಗತಿಗಳ) ವೃಂದದ ಖಾಲಿ ಹುದ್ದೆಗಳಿಗೆ ನಡೆಸಲಾದ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳ 1:2 ರ ಅನುಪಾತದಲ್ಲಿನ ತಾತ್ಕಾಲಿಕ ಪರಿಶೀಲನಾ ಪಟ್ಟಿಯನ್ನು ಇಲಾಖಾ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗಿದೆ.

ಈ ಪಟ್ಟಿಯಲ್ಲಿನ ಅಭ್ಯರ್ಥಿಗಳು ತಾ. 25 ಮತ್ತು 26 ರಂದು ಅಗತ್ಯ ಮೂಲ ದಾಖಲೆಯೊಂದಿಗೆ ಉಪ ನಿರ್ದೇಶಕರ ಕಚೇರಿಗೆ ಬೆಳಿಗ್ಗೆ 11 ರಿಂದ 3 ಗಂಟೆವರೆಗೆ ಪರಿಶೀಲನೆಗೆ ಹಾಜರಾಗಲು ಸೂಚಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಜಿಲ್ಲಾ ನೋಡಲ್ ಅಧಿಕಾರಿ ಕಾಶಿನಾಥ್ -9449704858 ಅಥವಾ ಕಚೇರಿ ದೂರವಾಣಿ 228337ನ್ನು ಸಂಪರ್ಕಿಸಬಹುದು.