ಸುಂಟಿಕೊಪ್ಪ, ನ. 22: ಐಗೂರು, ಯಡವಾರೆ, ಹೊರವಳೆ, ಹಾರಂಗಿ ವಿಭಾಗದ ಅನ್ನದಾತ ರೈತರಿಗೆ ಭತ್ತ ಬೆಳೆಯುಲು ಸಹಕಾರಿಯಾದ ಐಗೂರು ನಾಲೆಯಮೋರಿ ಕುಸಿದಿದ್ದು, ಪೂರ್ಣ ಕುಸಿಯುವ ಮುನ್ನ ದುರಸ್ತಿ ನಡೆಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಐಗೂರು ಚಿನ್ನಳಿಯಿಂದ ಸಣ್ಣ ನೀರಾವರಿ ಇಲಾಖೆಗೆ ಸೇರಿದ ನಾಲೆಯ ನೀರು ಐಗೂರು ಯಡವಾರೆ,ಹೊರವಳೆ ವಿಭಾಗದ ಕೃಷಿಕರಿಗೆ ಭತ್ತ ಬೆಳೆಯಲು ಅನುಕೂಲಕರವಾಗಿದ್ದು, ನಾಲೆಗೆ ಅಳವಡಿಸಿದ ಮೋರಿ ಭಾಗಶಃ ಕುಸಿದಿದೆ. ವಾಹನ ಚಾಲಕರು ಹರಸಾಹಸಪಟ್ಟು ತೆರಳುವ ಪರಿಸ್ಥಿತಿ ಬಂದಿದೆ; ಸಂಪೂರ್ಣ ಮೋರಿ ಕುಸಿದು ನಾಲೆಗೆ ಬಿದ್ದರೆ ಶಾಲಾ ಮಕ್ಕಳಿಗೆ ವಾಹನ ಚಾಲಕರಿಗೆ, ಸಾರ್ವಜನಿಕರಿಗೆ ದಾರಿ ಬಂದ್ ಆಗಲಿದೆ. ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಕೂಡಲೇ ಕ್ರಮ ವಹಿಸುವಂತೆ ಒತ್ತಾಯಿಸಿದ್ದಾರೆ.