ಶಾಸಕ ರಂಜನ್

ಸುಂಟಿಕೊಪ್ಪ, ನ. 22: ಕೊಡಗಿನಲ್ಲಿ ಸಹಕಾರ ಸಂಘ ಬಲಿಷ್ಠವಾಗಿ ಬೆಳೆಯುತ್ತಿದೆ ಸಹಕಾರ ಸಂಘ ಉಳಿ ಯಲು ಸರಕಾರದ ಕೊಡುಗೆಯೂ ಇದೆ ಎಂದು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಹೇಳಿದರು.

ಮಾದಾಪುರ ಕೃಷಿಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕೊಡಗು ಜಿಲ್ಲಾ ಸಹಕಾರ ಯೂನಿಯನ್, ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್, ಮಾದಾಪುರ, ಸುಂಟಿಕೊಪ್ಪ, ಐಗೂರು, ಗರ್ವಾಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಗಡಿನಾಡು ಬಿಳಿಗೇರಿ ವಿವಿದೋದ್ಧೇಶ ಸಹಕಾರ ದವಸ ಭಂಡಾರ ಹಾಗೂ ಕಾಂಡನಕೊಲ್ಲಿ ಸಹಕಾರ ದವಸ ಭಂಡಾರದ ಸಂಯುಕ್ತ ಆಶ್ರಯದಲ್ಲಿ 66ನೇ ಸಹಕಾರ ಸಪ್ತಾಹದ ಅಂಗವಾಗಿ ಹಿರಿಯ ಸಹಕಾರಿಗಳಿಗೆ ಸನ್ಮಾನ ಮತ್ತು ಯುವಜನ, ಮಹಿ¼ ಮತ್ತು ಅಬಲವರ್ಗಕ್ಕಾಗಿ ಸಹಕಾರ ಸಂಸ್ಥೆಗಳು ಎಂಬ ವಿಷಯದಡಿ ಏರ್ಪಡಿಸ ಲಾಗಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಂಜನ್, ವಾಣಿಜ್ಯ ಬ್ಯಾಂಕುಗಳಿಕ್ಕಿಂತ ಸುಲಭದಲ್ಲಿ ಸಹಕಾರ ಬ್ಯಾಂಕ್‍ನಿಂದ ರೈತರಿಗೆ ಸಾಲ ದೊರಕುತ್ತಿದೆ.

ಸಹಕಾರಿ ಕ್ಷೇತ್ರ ರಾಜಕೀಯ ರಹಿತವಾಗಿ ಕಾರ್ಯನಿರ್ವಹಿಸುತ್ತಿದೆ. ಸರಕಾರದ ಸಾಲಮನ್ನಾ ಯೋಜನೆ ಸಬ್ಸಿಡಿಯಿಂದ ರೈತರ ಜೀವನಮಟ್ಟ ಸುಧಾರಿಸಲು ಸಹಕಾರ ಸಂಘ ನೆರವಾಗಿದೆ ಎಂದು ಹೇಳಿದರು.

ಹಿರಿಯ ಸಹಕಾರಿಗಳಿಗೆ ಸನ್ಮಾನಿಸಿ ಮಾತನಾಡಿದ ಜಿಲ್ಲಾ ಸಹಕಾರಿ ಯೂನಿಯನ್‍ನ ಅಧ್ಯಕ್ಷರು ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಎ.ಕೆ. ಮನು ಮುತ್ತಪ್ಪ ಸಹಕಾರ ಸಂಘವನ್ನು ಪ್ರೋತ್ಸಾಹಿಸಿದ ಮಾಜಿ ಪ್ರಧಾನಿ ದಿ. ಜವಹರ್‍ಲಾಲ್ ನೆಹರು ಅವರ ಜನ್ಮದಿನವಾದ ನವೆಂಬರ್ 14 ರಿಂದ 7ದಿನಗಳ ಕಾಲ ಪ್ರತಿವರ್ಷ ಸಹಕಾರ ಸಪ್ತಾಹ ಕಾರ್ಯಕ್ರಮ ನಡೆಸಲಾಗುತ್ತಿದೆ. 1905 ರಲ್ಲಿ ಸ್ಥಾಪನೆಯಾದ ಸಹಕಾರ ಸಂಘ ದೇಶದಾದ್ಯಂತ ಹೆಮ್ಮರವಾಗಿ ಬೆಳೆದಿದೆ. ಕೊಡಗಿನಲ್ಲಿ ಸಹಕಾರ ಸಂಘಗಳು ಸಹಕಾರಿಗಳ ಪ್ರಾಮಾಣಿಕ ಸೇವೆ ಯಿಂದ ಉನ್ನತಮಟ್ಟಕ್ಕೆ ತಲಪಿದೆ. ಗ್ರಾಮೀಣ ಜನರ ಬದುಕಿಗೆ ಆಶಾಕಿರಣವಾಗಿದೆ.

ಕೊಡಗಿನ ಜನತೆ ಬಹುಬೇಗ ನಾಗರಿಕತೆಗೆ ಒಗ್ಗಿಕೊಂಡಿರುವದರಿಂದ ಸಹಕಾರ ಕ್ಷೇತ್ರ ವೇಗವಾಗಿ ಬೆಳೆಯಲು ಕಾರಣೀಭೂತವಾಯಿತು ಎಂದು ವಿವರಿಸಿದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಡಿ. ಮಂಜುನಾಥ ಮಾತನಾಡಿ, ಸಹಕಾರಿ ಸಂಘದವರು ಸಾಲ ನೀಡುವದು ಮರುಪಾವತಿಸು ವದಕ್ಕೆ ಸೀಮಿತವಾಗದೆ ಕ್ಷೇತ್ರವನ್ನು ವಿಸ್ತರಿಸಿ ಜನೋಪಯೋಗಿ ಯೋಜನೆ ಕಾರ್ಯರೂಪಕ್ಕೆ ತರುವಲ್ಲಿ ಮುಂದಾಗಬೇಕು. ಆ ನಿಟ್ಟಿನಲ್ಲಿ ಜನರತ್ತ ಸಹಕಾರ ಕ್ಷೇತ್ರವನ್ನು ಕೊಂಡ್ಯೊಯಬೇಕು ಸೋಮವಾರ ಪೇಟೆ ಕೃಷಿ ಪತ್ತಿನ ಸಹಕಾರ ಬ್ಯಾಂಕ್‍ನಲ್ಲಿ ಸದಸ್ಯರುಗಳಿಗೆ ವಿಮಾ ಸೌಲಭ್ಯ ಜಾರಿಗೆ ತಂದಿದ್ದೇವೆ ಎಂದೂ ತಿಳಿಸಿದರು.

ಮಹಿಳೆಯರ ಸೇರ್ಪಡೆ ಅಗತ್ಯ: ಸಹಕಾರ ಕ್ಷೇತ್ರದಲ್ಲಿ 50;50 ಅನುಪಾತದ ಮಹಿಳೆಯ ಸೇರ್ಪಡೆಯಿಂದ ಸಹಕಾರ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಬಹುದು. ಹಾಗೆಯೇ ಯುವ ಜನರು ಹಾಗೂ ಅಬಲವರ್ಗದವರನ್ನು ಸಹಕಾರ ಸಂಘದ ಸದಸ್ಯರಾಗಿ ಸೇರ್ಪಡೆ ಗೊಳಿಸುವ ಮೂಲಕ ಗ್ರಾಮೀಣ ಜನರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಕೆಲಸ ಆಗಬೇಕು ಎಂದು ಮಡಿಕೇರಿ ಸಹಕಾರಿ ತರಬೇತಿ ಕೇಂದ್ರದ ಪ್ರಾಚಾರ್ಯರಾದ ಡಾ. ರೇಣುಕಾ ಹೇಳಿದರು.

ವಿಶ್ವದಲ್ಲಿ ಜನ ಸಂಖ್ಯೆ ಶೇಕಡ 12 ರಷ್ಟು ಮಂದಿ ಮಾತ್ರ ಸಹಕಾರ ಸಂಘದಲ್ಲಿ ತೊಡಗಿಸಿಕೊಂಡಿದ್ದಾರೆ 28 ಕೋಟಿ ಮಂದಿ ಸಹಕಾರಿ ಉದ್ಯೋಗಿಗಳು ಇದ್ದಾರೆಂದರು.

ಸನ್ಮಾನ: ಹಿರಿಯ ಸಹಕಾರಿಗಳಾದ ಮಾದಾಪುರದ ಟಿ.ಎನ್. ಪ್ರಸನ್ನ ಸುಂಟಿಕೊಪ್ಪದ ಎಸ್.ಪಿ. ನಿಂಗಪ್ಪೈ ಗೂರಿನ ನಂದಿನಿ ವಿಶ್ವನಾಥ ರಾಜ್ ಅರಸು, ಕುಶಾಲನಗರದ ಪಾಸುರ ಉತ್ತಪ್ಪ, ಬಿಳಿಗೇರಿಯ ಬಿ.ಎಂ. ಸೋಮಯ್ಯ ಹಾಗೂ ಗರ್ವಾಲೆಯ ನಾಪಂಡ ಚಿಣ್ಣಪ್ಪ ಅವರುಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಅಧ್ಯಕ್ಷತೆಯನ್ನು ಮಾದಾಪುರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಎ. ಮೊಣ್ಣಪ್ಪ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕರುಗಳಾದ ಕನ್ನಡ ಸಂಪತ್, ಭರತ್‍ಕುಮಾರ್, ಬಿ.ಡಿ. ಮಂಜುನಾಥ, ಸಹಕಾರಿ ಯೂನಿ ಯನ್ ನಿರ್ದೇಶಕ ರಾಮಚಂದ್ರ, ಎಸ್.ಪಿ. ನಿಂಗಪ್ಪ, ಸುಂಟಿಕೊಪ್ಪ ವಿಎಸ್‍ಎಸ್‍ಎನ್ ಬ್ಯಾಂಕ್ ಅಧ್ಯಕ್ಷ ಎನ್.ಸಿ. ಪೊನ್ನಪ್ಪ (ಕ್ಲೈವಾ), ಐಗೂರು ವಿಎಸ್‍ಎಸ್‍ಎನ್ ಬ್ಯಾಂಕ್ ಅಧ್ಯಕ್ಷ ಎಂ.ಎಂ. ಬೋಪಯ್ಯ, ಗರ್ವಾಲೆ ಬ್ಯಾಂಕ್ ಅಧ್ಯಕ್ಷ ಕಾವೇರಪ್ಪ, ಬಿಳಿಗೇರಿ ದವಸ ಭಂಡಾರ ಅಧ್ಯಕ್ಷ ಪಿ.ಎನ್. ಪೂವಯ್ಯ, ಕಾಂಡನಕೊಲ್ಲಿ ದವಸ ಭಂಡಾರ ಅಧ್ಯಕ್ಷ ಪಿ.ಎ. ತಮ್ಮಯ್ಯ, ಸಹಕಾರಿ ಇಲಾಖೆ ಸಹಾಯಕ ನಿಬಂಧಕ ರವಿಕುಮಾರ್, ಎಂ.ಎನ್. ಕೊಮೊರಪ್ಪ ಇದ್ದರು.

ಮೊದಲಿಗೆ ಮಾದಾಪುರ ಸಂಘದ ನಿರ್ದೇಶಕ ತಮ್ಮಯ್ಯ ಸ್ವಾಗತಿಸಿ, ಜಿಲ್ಲಾ ಸಹಕಾರಿ ಯೂನಿಯನ್‍ನ ಸಿಇಓ ಯೋಗೇಂದ್ರ ನಾಯಕ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ನಂಜರಾಯಪಟ್ಟಣ: ನಂಜರಾಯಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾಲ್ನೂರು ಶಾಖೆಯಲ್ಲಿ ಸಹಕಾರ ಸಪ್ತಾಹದ ಅಂಗವಾಗಿ ‘ಸಹಕಾರ ಸಂಸ್ಥೆಗಳಿಗಾಗಿ ಶಾಸನಾಧಿಕಾರ ರೂಪಿಸುವ’ ದಿನಾಚರಣೆ ಆಚರಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಬಿ.ಸಿ. ಮಾದಯ್ಯ ವಹಿಸಿದ್ದರು.

ಕಾರ್ಯಕ್ರಮವನ್ನು ಶಾಸಕ ಅಪ್ಪಚ್ಚು ರಂಜನ್ ಉದ್ಘಾಟಿಸಿದರು. ಈ ಸಂದÀರ್ಭ ಸಂಘದ ನಿರ್ದೇಶಕ ಡಿ.ಎಲ್. ಮನು ಮಹೇಶ್ ಸರ್ವರನ್ನು ಸ್ವಾಗತಿಸಿದರು. ಡಿ.ಸಿ.ಸಿ. ಬ್ಯಾಂಕ್‍ನ ಅಧ್ಯಕ್ಷ ಕೆ.ಪಿ. ಗಣಪತಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಅಪ್ಪಚ್ಚು ರಂಜನ್ ಮಾತನಾಡಿ ರೈತರಿಗೆ ಸರಿಯಾದ ಸಮಯಕ್ಕೆ ಸಾಲನೀಡಿದ್ದಲ್ಲಿ ರೈತರು ಆರ್ಥಿಕವಾಗಿ ಮುಂದುವರಿ ಯಲು ಸಹಕಾರಿಯಾಗಲಿದೆ ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಸಂಘದ ಸದಸ್ಯರು ಹಾಜರಿದ್ದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಸಹಕಾರ ಯೂನಿಯನ್ ಮಡಿಕೇರಿ ಉಪಾಧ್ಯಕ್ಷ ಪಾಲಚಂಡ ಸಿ. ಅಚ್ಚಯ್ಯ ಉಪಸ್ಥಿತರಿದ್ದರು. ನಿರ್ದೇಶಕರಾದ ಬಿ.ಡಿ. ಮಂಜುನಾಥ್, ಬಿ.ಕೆ. ಚಿನ್ನಪ್ಪ, ಎಸ್.ಬಿ. ಭರತ್‍ಕುಮಾರ್, ಉಷ ತೇಜಸ್ವಿ, ಎಸ್.ಪಿ. ಲಿಂಗಪ್ಪ, ಹೆಚ್.ಎಸ್. ರಾಮಚಂದ್ರ, ಬಿ.ಎ. ರಮೇಶ್ ಚಂಗಪ್ಪ, ಬಸವನಹಳ್ಳಿ ಲ್ಯಾಂಪ್ ಸಹಕಾರ ಸಂಘದ ಅಧ್ಯಕ್ಷ ಎಸ್.ಎನ್. ರಾಜರಾವ್, ನಂಜರಾ ಯಪಟ್ಟಣ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಸ್.ಡಿ. ಉದಯ, ಪಿ. ದವಸ ಭಂಡಾರ ರಂಗ ಸಮುದ್ರದ ಪಿ.ಎಸ್. ಬಸಪ್ಪ, ಗುಡ್ಡೆಹೊ ಸೂರು ಹಾಲು ಉತ್ಪಾದಕರ ಸಹಕಾರ ಸಂಘದ ಬಿ.ವಿ. ಮೋಹನ್‍ಕುಮಾರ್, ಮತ್ತು ಸಹಕಾರಿ ಅಧಿಕಾರಿ ಎಂ.ವಿ. ಮೋಹನ್ ಉಪಸ್ಥಿತರಿದ್ದರು.

ಈ ಸಂದರ್ಭ ದಿನದ ಮಹತ್ವದ ಬಗ್ಗೆ ಭಾಗಮಂಡಲ ಕಾವೇರಿ ಕಾಲೇಜಿನ ಉಪನ್ಯಾಸಕ ಕೆ.ಜೆ. ದಿವಾಕರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ನಂಜರಾಯಪಟ್ಟಣ ಸಹಕಾರ ಸಂಘದÀ ಮುಖ್ಯ ಕಾರ್ಯನಿರ್ವಣಾಧಿಕಾರಿ ಕೆ.ಟಿ. ಧನಂಜಯ ಮತ್ತು ಸರ್ವ ನಿರ್ದೆಶಕರು ಹಾಜರಿದ್ದರು. ಸಹಕಾರಿ ಯೂನಿ ಯನ್‍ನ ಮುಖ್ಯ ಕಾರ್ಯ ನಿರ್ವಣಾಧಿಕಾರಿ ಯೋಗೇಂದ್ರ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಸಂಘದ ಸಿಬ್ಬಂದಿ ಪ್ರೇಮ ಮತ್ತು ತಂಡದವರಿಂದ ಪ್ರಾರ್ಥನೆ ನಡೆಯಿತು. ಕಾರ್ಯಕ್ರಮ ದಲ್ಲಿ ವಿವಿಧ ಸ್ತ್ರೀಶಕ್ತಿ ಸಂಘದ ತಂಡಗಳು ಭಾಗವಹಿಸಿದ್ದವು.

ಬಾಳೆಲೆ: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕೊಡಗು ಜಿಲ್ಲಾ ಸಹಕಾರ ಯೂನಿಯನ್, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಸಹಕಾರ ಇಲಾಖೆ, ಬಾಳೆಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೇತೃತ್ವದಲ್ಲಿ 66ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಸಹಕಾರ ಸಂಸ್ಥೆಗಳ ದಿನಾಚರಣೆ ಬಾಳೆಲೆ ಕೊಡವ ಸಮಾಜದ ಸಭಾಂಗಣದಲ್ಲಿ ನಡೆಯಿತು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕರು ಹಾಗೂ ಜಿಲ್ಲಾ ಸಹಕಾರ ಯೂನಿಯನ್‍ನ ಅಧ್ಯಕ್ಷ ಎ.ಕೆ. ಮನು ಮುತ್ತಪ್ಪ ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ಪಿ.ಐ. ಬೆಳ್ಯಪ್ಪ, ಪಿ.ಎಂ. ಚಂಗಪ್ಪ, ಕೆ.ಎಂ. ಮೊಣ್ಣಪ್ಪ ಹೀಗೆ ಹಲವಾರು ಹಿರಿಯ ಸಹಕಾರಿಗಳು ದುಡಿದ ಫಲವಾಗಿ ನಾವು ಇಂದು ಸದೃಢವಾಗಿ ಬೆಳೆದಿದ್ದೇವೆ ಎಂದರು. ಅನೇಕ ಸಹಕಾರ ಸಂಘಗಳು ಸ್ಥಾಪನೆಯಾಗಿ ರೈತರ ಕಷ್ಟಗಳಿಗೆ ನೆರವಾಗಿದೆ. ಅಂತೆಯೇ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಸ್ಥಾಪನೆಯಾಗಿ ಮುಂದಿನ ವರ್ಷಕ್ಕೆ 100 ವರ್ಷಗಳನ್ನು ಪೂರೈಸಲಿದೆ ಎಂದರು.

ಹಿರಿಯ ಸಹಕಾರಿಗಳಿಗೆ ಸನ್ಮಾನಿಸಿ ಮಾತನಾಡಿದ ಅಪೆಕ್ಸ್ ಬ್ಯಾಂಕ್ ನಿರ್ದೇಶಕರು ಹಾಗೂ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಅಧ್ಯಕ್ಷ ಕೆ.ಪಿ. ಗಣಪತಿ, ಸಹಕಾರ ಸಪ್ತಾಹವನ್ನು ರಾಷ್ಟ್ರಮಟ್ಟದಲ್ಲಿ ಆಚರಣೆ ಮಾಡಲಾಗುತ್ತದೆ. ಭಾರತದಲ್ಲಿ 8.5.1905 ರಲ್ಲಿ ಗದಗ್ ಜಿಲ್ಲೆಯಲ್ಲಿ ಸಹಕಾರ ಚಳುವಳಿ ಪ್ರಾರಂಭವಾದರೆ ಕೊಡಗು ಜಿಲ್ಲೆಯಲ್ಲಿಯೂ 22.05.1905 ರಲ್ಲಿ ತಲ್ತಾರೆ ಶೆಟ್ಟಳ್ಳಿ ಗ್ರಾಮದಲ್ಲಿ ಗೌಡ್ನಮನೆ ಪಿ. ದೊಡ್ಡಯ್ಯ ಪತ್ತಿನ ಸಹಕಾರ ಸಂಘವನ್ನು ಪ್ರಥಮವಾಗಿ ಸ್ಥಾಪನೆ ಮಾಡುವದರ ಮೂಲಕ ಸಹಕಾರ ಚಳುವಳಿಯ ಪ್ರಾರಂಭಕ್ಕೆ ಅಡಿಗಲ್ಲನ್ನು ಹಾಕಿದ್ದಾರೆ ಎಂದು ನುಡಿದರು.

ಈ ಸಂದರ್ಭ ಮಾಚಂಗಡ ಸಿ. ಮುತ್ತಮ್ಮ, ಪೋಡಮಾಡ ಜಾನಕಿ, ಪೋಡಮಾಡ ಉತ್ತಪ್ಪ, ಮಲಚೀರ ಸಿ. ವಿಠಲ್, ಮಾಚಂಗಡ ಕೆ. ಪೂವಯ್ಯ, ಆದೇಂಗಡ ಅಶೋಕ್, ಮಚ್ಚಮಾಡ ಕಂದಾ ಭೀಮಯ್ಯ, ಚಕ್ಕೇರ ಸೋಮಯ್ಯ, ಕೊಂಗಂಡ ಎಂ. ಗಣಪತಿ, ಪುಚ್ಚಿಮಾಡ ಪೂಣಚ್ಚ ಅವರುಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಾಳೆಲೆ ಪ್ಯಾಕ್ಸ್‍ನ ಅಧ್ಯಕ್ಷ ಕೃಷ್ಣ ಗಣಪತಿ ಸ್ವಾಗತಿಸಿದರು. ದಿನದ ಮಹತ್ವದ ಕುರಿತು ಕೆ.ಐ.ಸಿ.ಎಂ.ನ ಪ್ರಾಂಶುಪಾಲೆ ಡಾ. ಆರ್.ಎಸ್. ರೇಣುಕಾ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರುಗಳಾದ ಬಿ.ಎ. ರಮೇಶ್ ಚಂಗಪ್ಪ, ಕೊಡಪಾಲು ಗಣಪತಿ, ಪಿ.ಸಿ. ರಾಮಚಂದ್ರ, ಬಾಳೆಲೆ ಎ.ಪಿ.ಸಿ.ಎಂ. ಎಸ್.ನ ಅಧ್ಯಕ್ಷ ಬೋಸ್ ಮಂದಣ್ಣ, ಕಾನೂರು ಪ್ಯಾಕ್ಸ್ ಅಧ್ಯಕ್ಷ ವಿವೇಕ್, ತಿತಿಮತಿ ಪ್ಯಾಕ್ಸ್ ಅಧ್ಯಕ್ಷ ಸಿ.ಎಂ. ರಾಮಕೃಷ್ಣ, ಮಾಯಮುಡಿ ಪ್ಯಾಕ್ಸ್ ಅಧ್ಯಕ್ಷ ಕಿರಣ್ ಅಪ್ಪಯ್ಯ, ನಲ್ಲೂರು ಪ್ಯಾಕ್ಸ್‍ನ ಅಧ್ಯಕ್ಷ ಎ. ಸುಧೀರ್ ಹಾಗೂ ವೀರಾಜಪೇಟೆ ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಎಂ.ಎಸ್. ಮೋಹನ್ ಉಪಸ್ಥಿತರಿದ್ದರು.

ಕಬ್ಬಡಕೇರಿ: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿ., ಮಡಿಕೇರಿ, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ., ಮಡಿಕೇರಿ, ಸಹಕಾರ ಇಲಾಖೆ, ಕೊಡಗು ಜಿಲ್ಲೆ, ಹೊದ್ದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೇತೃತ್ವದಲ್ಲಿ 66ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ‘ಸಹಕಾರ ಸಂಸ್ಥೆಗಳ ನಡುವೆ ಸಹಕಾರವನ್ನು ಬಲಪಡಿಸುವ’ ದಿನಾಚರಣೆಯನ್ನು ತಾ. 17 ರಂದು ಕಬ್ಬಡಕೇರಿ ಸಹಕಾರ ದವಸ ಭಂಡಾರದ ಸಭಾಂಗಣದಲ್ಲಿ ಏರ್ಪಡಿಸಲಾಯಿತು.

‘ಕೊಡಗು ಪ್ರಕೃತಿಯ ತವರು, ಸೇನೆಯಲ್ಲಿ ಹೆಚ್ಚಿನವರು ದುಡಿಯುತ್ತಿದ್ದಾರೆ. ಕ್ರೀಡಾ ವಲಯ ಹಾಗೂ ಕೃಷಿ ವಲಯಗಳಾದ ಕಾಫಿ, ಏಲಕ್ಕಿ, ಕರಿಮೆಣಸು, ಹಾಗೂ ಕಿತ್ತಳೆ ಬೆಳೆಗಳ ಮೂಲಕ ರಾಷ್ಟ್ರಮಟ್ಟದಲ್ಲಿ ಹೆಸರು ವಾಸಿಯಾಗಿದೆ. ಅಂತೆಯೇ ಸಹಕಾರ ಕ್ಷೇತ್ರದಲ್ಲಿಯೂ ಸಹ ಹೆಸರು ವಾಸಿಯಾಗಿದೆ. ರಾಜ್ಯದಲ್ಲಿ ಪ್ರಥಮ ಸಹಕಾರ ಸಂಘ ಸ್ಥಾಪನೆಯಾದ ಕೇವಲ 14 ದಿನಗಳ ಅಂತರದಲ್ಲಿ ಅಂದರೆ 1905 ಸಾಲಿನ ಮೇ. 5ರಲ್ಲಿ ತಲ್ತಾರೆ ಶೆಟ್ಟಳ್ಳಿಯಲ್ಲಿ ಪ್ರಥಮ ಪತ್ತಿನ ಸಹಕಾರ ಸಂಘ ಸ್ಥಾಪನೆಮಾಡಿದವರು ಕುರಾದ ಗೌಡ್ನಮನೆ ಪಿ. ದೊಡ್ಡಯ್ಯರವರು. ಅವರ ಕನಸಿನ ಸಹಕಾರ ಕ್ಷೇತ್ರವನ್ನು ಕಟ್ಟಿ ಬೆಳೆಸಲು ನಾವೆಲ್ಲರೂ ಶ್ರಮಿಸಬೇಕಾಗಿದೆ’ ಎಂದು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಹಾಗೂ ಕೊಡಗು ಜಿಲ್ಲಾ ಸಹಕಾರ ಯೂನಿಯನ್‍ನ ಅಧ್ಯಕ್ಷ ಎ.ಕೆ. ಮನು ಮುತ್ತಪ್ಪರವರು ಅಭಿಪ್ರಾಯಪಟ್ಟರು.

ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಕೆಲವೊಂದು ಷರತ್ತುಗಳೊಂದಿಗೆ ರಾಜ್ಯದಲ್ಲಿ ಪ್ರಪ್ರಥಮವಾಗಿ ಗದಗಿನ ಕಣಗಿನಹಾಳ ಗ್ರಾಮದಲ್ಲಿ ಪತ್ತಿನ ಸಹಕಾರ ಸಂಘವನ್ನು ಸಿದ್ದನಗೌಡ ಸಂಣರಾಮನಗೌಡ ಪಾಟೀಲರು ಸ್ಥಾಪಿಸಿದರು. ಸಹಕಾರ ಸಂಘಗಳಲ್ಲಿ ದುಡಿಯುವ ಆಡಳಿತ ಮಂಡಳಿ ಸದಸ್ಯರು ನಿಸ್ವಾರ್ಥ ಹಾಗೂ ಪ್ರತಿಪಲಾಪೇಕ್ಷೆ ಇಲ್ಲದೆ ಸೇವೆ ಸಲ್ಲಿಸಬೇಕೆಂದು ಕರೆ ನೀಡಿದರು. ಅಲ್ಲದೆ ಈ ದಿಸೆಯಲ್ಲಿ ಹೊದ್ದೂರು ಪ್ಯಾಕ್ಸ್‍ನ ನಿರ್ದೇಶಕರುಗಳು ಸಂಘದ ಆಡಳಿತ ಮಂಡಳಿ ಸಭೆಯಲ್ಲಿ ಯಾವದೇ ಭತ್ಯೆಗಳನ್ನು ಸ್ವೀಕರಿಸದೆ ಇರುವದು ಒಂದು ಉತ್ತಮವಾದ ಉದಾಹರಣೆಯೆಂದು ಈ ಸಂದರ್ಭ ಶ್ಲಾಘಿಸಿದರು. ಸಹಕಾರ ದ್ವಜಾ ರೋಹಣವನ್ನು ನೆರವೇರಿಸಿ ಮಾತನಾಡಿದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಉಪಾಧ್ಯಕ್ಷ ಕೆ.ಎಸ್. ಹರೀಶ್ ಪೂವಯ್ಯ, ಕೊಡಗು ಜಿಲ್ಲೆಯ ಸಹಕಾರ ಕ್ಷೇತ್ರದಲ್ಲಿ ಪಿ.ಐ. ಬೆಳ್ಯಪ್ಪ, ಪಿ.ಎಂ. ಚಂಗಪ್ಪ, ಕೆ.ಎಂ. ಮೊಣ್ಣಪ್ಪ ಹೀಗೆ ಹಲವಾರು ಹಿರಿಯ ಸಹಕಾರಿಗಳು ದುಡಿದಿದ್ದಾರೆ. ಅವರುಗಳ ಸೇವೆಯನ್ನು ನಾವು ವ್ಯರ್ಥ ಮಾಡಲು ಬಿಡಬಾರದೆಂದು ಹಾಗೂ ಸಂಘಗಳಲ್ಲಿ ಇತ್ತೀಚೆಗೆ ನಡೆಯುತ್ತಿರುವ ದುರುಪಯೋಗದಿಂದಾಗಿ ಸಹಕಾರ ಸಂಘಗಳ ಮೇಲೆ ಕೆಟ್ಟ ಅಭಿಪ್ರಾಯ ಬರುವಂತಹ ಸನ್ನಿವೇಶ ಸೃಷ್ಟಿಯಾಗು ತ್ತಿದ್ದು ಈ ದಿಸೆಯಲ್ಲಿ ಆಡಳಿತ ಮಂಡಳಿ ಸದಸ್ಯರು ಸಿಬ್ಬಂದಿಗಳ ಮೇಲೆ ಹಿಡಿತ ಸಾಧಿಸಿ ಸಂಘದ ಬೆಳೆವಣಿಗೆಗೆ ಶ್ರಮಿಸ ಬೇಕಾಗಿದೆ ಎಂದು ಕರೆ ನೀಡಿದರು

ಹಿರಿಯ ಸಹಕಾರಿಗಳಿಗೆ ಸನ್ಮಾನಿಸಿ ಮಾತನಾಡಿದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಹಾಗೂ ಕೊಡಗು ಜಿಲ್ಲಾ ಸಹಕಾರ ಯೂನಿಯನ್ನಿನ ನಿರ್ದೇಶಕ ಕನ್ನಂಡ ಸಂಪತ್, ಪಂಡಿತ್ ಜವಾಹರಲಾಲ್ ನೆಹರೂರವರ ಹುಟ್ಟಿದ ದಿನದಿಂದ ಸಹಕಾರ ಸಪ್ತಾಹವನ್ನು ರಾಷ್ಟ್ರಮಟ್ಟದಲ್ಲಿ ಆಚರಣೆ ಮಾಡಲಾಗುತಿದೆ. ಸಹಕಾರ ಸಂಘಗಳು ಡಿಜಿಟಲೀಕರಣ ವ್ಯವಸ್ಥೆಯಾದ ಎ.ಟಿ.ಎಂ., ನೆಪ್ಟ್, ಆರ್.ಟಿ.ಜಿ.ಎಸ್., ಕೋರ್ ಬ್ಯಾಂಕಿಂಗ್, ಇಂಟರ್‍ನೆಟ್ ಬ್ಯಾಂಕಿಂಗ್ ಹೀಗೆ ಹಲವು ವಿವಿಧ ಬ್ಯಾಂಕಿಂಗ್ ಸೌಲಭ್ಯವನ್ನು ಅಳವಡಿಸಿ ಕೊಳ್ಳಬೇಕೆಂದು ಈ ಸಂದರ್ಭ ಕರೆ ನೀಡಿದರು. ಈ ಸಂದರ್ಭ ಕೆ.ಜೆ. ಪದ್ಮ, ಸಿ.ಜೆ. ಬೋಪಯ್ಯ, ಎಂ.ಯು. ಕರುಂಬಯ್ಯ, ಡಿ.ಕೆ. ಸುಬ್ರಮಣಿ ಅವರುಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹೊದ್ದೂರು ಪ್ಯಾಕ್ಸ್‍ನ ಅಧ್ಯಕ್ಷ ಎನ್.ಡಿ. ಪೂಣಚ್ಚ ಮಾತನಾಡಿ, ಹೊದ್ದೂರು ಪ್ಯಾಕ್ಸ್ ಅತ್ಯಂತ ಸುಭದ್ರ ಸ್ಥಿತಿಯನ್ನು ಕಾಣಲು ದುಡಿದಂತಹ ಹಿರಿಯ ಸಹಕಾರಿಗಳನ್ನು ನಾವು ಈ ಸಮಾರಂಭದಲ್ಲಿ ಸನ್ಮಾನಿಸಿದ್ದೇವೆ. ಅಂತೆಯೇ ಸಂಘದಲ್ಲಿ ಸದಸ್ಯರು ಪೂರ್ಣ ಪ್ರಮಾಣದಲ್ಲಿ ವ್ಯವಹಾರ ನಡೆಸಿ ಸಂಘದ ಇನ್ನಷ್ಟು ಏಳಿಗೆಗೆ ಕೈ ಜೋಡಿಸಬೇಕೆಂದು ಕರೆ ನೀಡಿದರು. ದಿನದ ಮಹತ್ವದ ಕುರಿತು ಭಾಗ ಮಂಡಲ, ಕಾವೇರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಕೆ.ಜೆ. ದಿವಾಕರ್ ಸಮಗ್ರ ಮಾಹಿತಿ ನೀಡಿದರು. ವೇದಿಕೆಯಲ್ಲಿ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ ಬಿ.ಎ. ರಮೇಶ್ ಚಂಗಪ್ಪ, ಕೊಡಪಾಲು ಗಣಪತಿ, ಎನ್.ಎ. ರವಿ ಬಸಪ್ಪ, ಕೆ.ಎಂ. ತಮ್ಮಯ್ಯ, ಕಬ್ಬಡಕೇರಿ ಸಹಕಾರ ದವಸ ಭಂಡಾರದ ಅಧ್ಯಕ್ಷೆ ಟಿ.ಎಲ್. ರಾಜೇಶ್ವರಿ, ಸಹಕಾರ ಸಂಘಗಳ ಸಹಾಯಕ ನಿಬಂಧಕ ಎಚ್.ಡಿ. ರವಿಕುಮಾರ್ ಮೊದಲಾದವರು ಉಪಸ್ಥಿತರಿದ್ದರು.