ಕೆನರಾ ಬ್ಯಾಂಕ್‍ನ ಮಡಿಕೇರಿ ಪ್ರಾದೇಶಿಕ ಕಚೇರಿ ಸೇರಿದಂತೆ ಜಿಲ್ಲೆಯ 24 ಶಾಖೆಗಳಲ್ಲಿ ಸಂಸ್ಥಾಪಕರ ದಿನಾಚರಣೆಯನ್ನು ಆಚರಿಸಲಾಯಿತು.
ಮಡಿಕೇರಿ: ಕೆನರಾ ಬ್ಯಾಂಕ್‍ನ ನಗರದ ಪ್ರಾದೇಶಿಕ ಕಚೇರಿಯಲ್ಲಿ 114ನೇ ಸಂಸ್ಥಾಪಕರ ದಿನಾಚರಣೆಯನ್ನು ಸಂಸ್ಥಾಪಕ ದಿ. ಅಮ್ಮೆಂಬಾಳ್ ಸುಬ್ಬರಾವ್ ಪೈ ಅವರ ನೆನಪಿನಲ್ಲಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ ಹಾಗೂ ಮಡಿಕೇರಿಯ ಕೇಂದ್ರೀಯ ವಿದ್ಯಾಲಯದಲ್ಲಿ ನಡೆಸಿದ ಕ್ವಿಜ್ ಸ್ಪರ್ಧೆಯ ವಿಜೇತರಿಗೆ ಬಹುಮಾನವನ್ನು ನೀಡಲಾಯಿತು.
ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ (ಸಿಎಸ್ ಆರ್) ಮೂಲಕ ಈ ದಿನ ಜಿಲ್ಲೆಯಲ್ಲಿ 136 ವಿದ್ಯಾರ್ಥಿನಿಯರಿಗೆ ರೂ. 5.12 ಲಕ್ಷ ವಿದ್ಯಾರ್ಥಿ ವೇತನ ನೀಡಲಾಯಿತು ಎಂದು ವಿ.ಜೆ. ಅರುಣ, ಪ್ರಾದೇಶಿಕ ಕಚೇರಿಯ ಮುಖ್ಯಸ್ಥ ತಿಳಿಸಿದರು.
2013-14ನೇ ವರ್ಷದಿಂದ ಕೆನರಾ ಬ್ಯಾಂಕಿನಲ್ಲಿ “ಕೆನರಾ ವಿದ್ಯಾ ಜ್ಯೋತಿ” ಎಂಬ ಯೋಜನೆಯಡಿಯಲ್ಲಿ ಸರ್ಕಾರಿ-ಸರ್ಕಾರಿ ಅನುದಾನಿತ ಶಾಲೆಯಲ್ಲಿ ಓದುತ್ತಿರುವ ಪರಿಶಿಷ್ಟ ಜಾತಿ - ವರ್ಗಕ್ಕೆ ಸೇರಿದ ಪ್ರತಿಭಾವಂತ ಹೆಣ್ಣು ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ. 5, 6, ಮತ್ತು 7ನೇ ತರಗತಿಯ ವಿದ್ಯಾರ್ಥಿನಿಯರಿಗೆ ತಲಾ ರೂ. 2,500 ಹಾಗೂ 8, 9 ಮತ್ತು 10ನೇ ತರಗತಿಯ ವಿದ್ಯಾರ್ಥಿನಿಯರಿಗೆ ತಲಾ ರೂ. 5,000 ವಿದ್ಯಾರ್ಥಿ ವೇತನದ ಮೊತ್ತವಾಗಿರುತ್ತದೆ.
ಕೊಡಗು ಜಿಲ್ಲೆಯ ಬ್ಯಾಂಕಿನ ವ್ಯವಹಾರದ ಕುರಿತಾಗಿ ಮಾಹಿತಿ ನೀಡಿದ ವಿ.ಜೆ. ಅರುಣ ಕೆನರಾ ಬ್ಯಾಂಕ್ ಜಿಲ್ಲೆಯಲ್ಲಿ 24 ಶಾಖೆಗಳನ್ನು ಹೊಂದಿದೆ. ಅಲ್ಲದೆ ಜಿಲ್ಲೆಯ ಒಟ್ಟು ಬ್ಯಾಂಕಿಂಗ್ ವಹಿವಾಟಿನಲ್ಲಿ ಅಗ್ರಸ್ಥಾನದಲ್ಲಿದೆ ಎಂದರು. ಬ್ಯಾಂಕಿನ ಡಿಜಿಟಲ್ ಸೇವೆಯ ಸೌಕರ್ಯಗಳು ಉತ್ತಮ ಗುಣಮಟ್ಟ ಹೊಂದಿದ್ದು, ಪ್ರಚಲಿತ ತಂತ್ರಜ್ಞಾನವನ್ನು ಮೈಗೂಡಿಸಿಕೊಂಡಿದೆ ಎಂದು ತಿಳಿಸಿದರು. ವಿಭಾಗೀಯ ಪ್ರಬಂಧಕ ಪ್ರಕಾಶ್ ಜಿ.ಸಿ., ಮುಖ್ಯ ಪ್ರಬಂಧಕ ವಿಕ್ಟರ್ ಡಿಕ್ರೂಜ್, ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ ಮುಖ್ಯಸ್ಥ ಬಾಲಚಂದ್ರ ಹಾಗೂ ಇತರ ಅಧಿಕಾರಿಗಳು ಈ ಸಂದರ್ಭ ಉಪಸ್ಥಿತರಿದ್ದರು.ನಾಪೋಕ್ಲು: ಇಲ್ಲಿನ ಕೆನರಾ ಬ್ಯಾಂಕ್ ಶಾಖೆಯಲ್ಲಿ ಸಂಸ್ಥಾಪಕರ ದಿನವನ್ನು ಆಚರಿಸಲಾಯಿತು. ಬ್ಯಾಂಕ್‍ನ ವ್ಯವಸ್ಥಾಪಕರಾದ ಸಫೀನ್ ಶಾ ಕಾರ್ಯಕ್ರಮ ಉದ್ಘಾಟಿಸಿ ಬ್ಯಾಂಕಿನ ಸಂಸ್ಥಾಪಕ ದಿ. ಅಮ್ಮೆಂಬಾಳ್ ಸುಬ್ಬರಾಯ ಪೈ ಅವರ 114ನೇ ಜನ್ಮ ದಿಚಾಚರಣೆಯನ್ನು ಆಚರಿಸಲಾಯಿತು.
ಅತಿಥಿಗಳಾಗಿ ಮೇರಿ ನಾಣಯ್ಯ, ಡಾ. ರಾಜೇಂದ್ರ ಪ್ರಸಾದ್, ಕೆ.ಎಂ. ಹಸೈನಾರ್, ಶೌಕತ್ ಹಾಜಿ, ಎಂ.ಬಿ. ಮಾಚಯ್ಯ, ಬ್ಯಾಂಕ್ ಸಿಬ್ಬಂದಿಗಳು ಮತ್ತಿತರರು ಹಾಜರಿದ್ದರು. ಬ್ಯಾಂಕ್‍ನ ವ್ಯವಸ್ಥಾಪಕರಾದ ಸಫೀನ್ ಶಾ ಮಾತನಾಡಿ, ಬ್ಯಾಂಕ್ ಸಹ ವ್ಯವಸ್ಥಾಪಕಿ ಅಂಜನ ಜಿ.ಜಿ. ವಂದಿಸಿದರು.ಕಾರ್ಯಕ್ರಮದಲ್ಲಿ ಸಂಸ್ಥಾಪಕರ ದಿನಾಚರಣೆ ಅಂಗವಾಗಿ ಗ್ರಾಹಕರಿಗೆ ಸಿಹಿ ಹಂಚಲಾಯಿತು.*ಗೋಣಿಕೊಪ್ಪಲು: ಕೆನರಾ ಬ್ಯಾಂಕ್‍ನ 114ನೇ ಸಂಸ್ಥಾಪನಾ ದಿನಾಚರಣೆಯನ್ನು ಗೋಣಿಕೊಪ್ಪಲು ಕೆನರಾ ಬ್ಯಾಂಕಿನಲ್ಲಿ ಆಚರಿಸಲಾಯಿತು.
ಬ್ಯಾಂಕಿನ ಹಿರಿಯ ಗ್ರಾಹಕರಾದ ಕೊಳ್ಳಿಮಾಡ ಅಜಿತ್ ಅಯ್ಯಪ್ಪ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.
ಬ್ಯಾಂಕಿನ ಪ್ರದಾನ ವ್ಯವಸ್ಥಾಪಕ ಟಿ.ವಿ. ಸಜಿ ಅವರು ಪ್ರಾಸ್ತಾವಿಕ ಮಾತನಾಡಿ ಬ್ಯಾಂಕಿನಿಂದ ಗ್ರಾಹಕರಿಗೆ ನೀಡುತ್ತಿರುವ ಸೌಲಭ್ಯಗಳ ಬಗ್ಗೆ ಮತ್ತು ಬ್ಯಾಂಕಿನ ಪ್ರಗತಿಯ ಬಗ್ಗೆ ಮಾಹಿತಿ ನೀಡಿದರು. ಬ್ಯಾಂಕಿನ ಸಂಸ್ಥಾಪಕಾದ ಹಿರಿಯ ಆರ್ಥಿಕ ತಜ್ಞ ದಿವಂಗತ ಅಮ್ಮಂಬಳೆ ಸುಬ್ಬರಾವ್ ಪೈ ಅವರ ಚಿಂತನೆಯಲ್ಲಿ ಮತ್ತು ಪರಿಶ್ರಮದಿಂದ ಹುಟ್ಟಿದ ಬ್ಯಾಂಕ್ ಇಂದು ಉತ್ತಮ ಸೇವೆಯೊಂದಿಗೆ 113 ವರ್ಷಗಳನ್ನು ಪೂರೈಸಿದೆ. ಇಂತಹ ಬ್ಯಾಂಕಿನಲ್ಲಿ ಸೇವೆ ಸಲ್ಲಿಸುವದೇ ಹೆಮ್ಮೆ ಎಂದು ಹೇಳಿದರು.
ಇದೇ ಸಂದರ್ಭ ಬ್ಯಾಂಕಿನ ಸೇವೆಯಲ್ಲಿ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಪರಿಶಿಷ್ಟ ಪಂಗಡ ಮತ್ತು ವರ್ಗದ ಬಡ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು. ಸಣ್ಣ ಉದ್ದಿಮೆದಾರರಿಗೆ ಮತ್ತು ಕೃಷಿಕರಿಗೆ ತಮ್ಮ ಕ್ಷೇತ್ರದಲ್ಲಿ ಅಭಿವೃದ್ದಿ ಹೊಂದಲು ಮತ್ತು ಆರ್ಥಿಕವಾಗಿ ಸಬಲತೆಯನ್ನು ಸಾಧಿಸಲು ಸಾಲವನ್ನು ನೀಡಲಾಯಿತು.
ಬ್ಯಾಂಕಿನಿಂದ ಗ್ರಾಹಕರಿಗೆ ಮುಂದಿನ ದಿನಗಳಲ್ಲಿ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಗ್ರಾಹಕರಾದ ಎಂ.ಎಸ್. ಸುಬ್ರಮಣಿ, ಮತ್ರಂಡ ಪ್ರವೀಣ್, ಪೆÇನ್ನಮ್ಮ, ಇವರುಗಳು ವಿಚಾರ ಪ್ರಸ್ತಾಪಿಸಿ ಮಾತನಾಡಿದರು. ಬ್ಯಾಂಕಿನ ಹಿರಿಯ ಗ್ರಾಹಕರಾದ ಅಜ್ಜಿನೀಕಂಡ ತಿಮ್ಮಯ್ಯ, ಸುಮಿಸುಬ್ಬಯ್ಯ ಉಪಸ್ಥಿತರಿದ್ದರು.
ಬ್ಯಾಂಕಿನ ಉಪವ್ಯವಸ್ಥಾಪಕರಾದ ಕರುಂಬಯ್ಯ ಸ್ವಾಗತಿಸಿ, ಸುಮಿಸುಬ್ಬಯ್ಯ ಪ್ರಾರ್ಥಿಸಿ ಬ್ಯಾಂಕಿನ ಸಿಬ್ಬಂದಿ ಮಧು ವಂದಿಸಿದರು. ನಂತರ ನೆರೆದ ಬ್ಯಾಂಕಿನ ಗ್ರಾಹಕರಿಗೆ ಸಿಹಿ ವಿತರಿಸಿ ಸಂಭ್ರಮಿಸಲಾಯಿತು.
.