ಮಡಿಕೇರಿ, ನ. 21: ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಸ್ಥಾನದಿಂದ ತಮ್ಮನ್ನು ದಿಢೀರ್ ಆಗಿ ಬದಲಾಯಿಸಿ ಎಂ.ಎ. ಉಸ್ಮಾನ್ ಅವರನ್ನು ನೇಮಕ ಮಾಡಿರುವದರಿಂದ ತಮಗೆ ವೈಯಕ್ತಿವಾಗಿ ಯಾವದೇ ಬೇಸರವಿಲ್ಲವೆಂದು ನಿರ್ಗಮಿತ ಅಧ್ಯಕ್ಷ ಎ.ಕೆ. ಹ್ಯಾರಿಸ್ ಸ್ಪಷ್ಟಪಡಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ಸ್ಥಾನವನ್ನು ತಮಗೆ ನೀಡಿದ್ದು, ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತೇನೆ. ಜಿಲ್ಲಾಧ್ಯಕ್ಷ ಸ್ಥಾನದಿಂದ ತಮ್ಮನ್ನು ಕೈಬಿಟ್ಟಿರುವದರಿಂದ ಅಸಮಾಧಾನವಿಲ್ಲ, ಬದಲಿಗೆ ರಾಜ್ಯ ಉಪಾಧ್ಯಕ್ಷ ಸ್ಥಾನ ದೊರೆತ್ತಿರುವದು ಸಂತಸ ತಂದಿದೆ ಎಂದರು.