ಮಡಿಕೇರಿ, ನ. 21: ಅಮ್ಮತ್ತಿ ಗ್ರಾಮ ಪಂಚಾಯಿತಿಯಲ್ಲಿ ಮಹಿಳಾ ಸಂಘ ಮತ್ತು ಸ್ವಸಹಾಯ ಸಂಘÀದ ಸದಸ್ಯರುಗಳಿಗೆ ತೋಟಗಾರಿಕಾ ಇಲಾಖೆ ಪೊನ್ನಂಪೇಟೆಯವರಿಂದ ಅಣಬೆ ಬೇಸಾಯ ಕಾರ್ಯಕ್ರಮವನ್ನು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಸೋಮಶೇಖರ್ ನಡೆಸಿಕೊಟ್ಟರು. ಈ ಸಂದರ್ಭ ಅಮ್ಮತ್ತಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಶಾಂತ ಪಿ.ಎಸ್., ತಾಲೂಕು ಪಂಚಾಯಿತಿ ಸದಸ್ಯೆ ಶೋಭಾ ಶ್ರೀನಿವಾಸ್, ಪಂಚಾಯಿತಿ ಸದಸ್ಯರಾದ ತಾಯಮ್ಮ ಬಿ.ಎನ್., ಚಂದ್ರಕಲಾ ಕೆ, ಜೀನತ್ ಪಿ.ಎ., ಕಾರ್ಮಾಡು ಗ್ರಾಮ ಪಂಚಾಯಿತಿಯ ಸದಸ್ಯರಾದ ಸರೋಜಿನಿ, ವಿದ್ಯಾ ಪಿ.ಜಿ, ತೋಟಗಾರಿಕ ಇಲಾಖೆಯ ಅಧಿಕಾರಿ ಈರಣ್ಣ ಹೊಸಮನಿ ಮತ್ತು ಸಿಬ್ಬಂದಿ ವರ್ಗ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೇದಪ್ಪ ಎಂ.ಎಸ್. ಹಾಜರಿದ್ದರು.