ಸಿದ್ದಾಪುರ, ನ. 21: ನೆಲ್ಯಹುದಿಕೇರಿ ಗ್ರಾಮಪಂಚಾಯಿತಿಯ ವ್ಯಾಪ್ತಿಗೊಳಪಡುವ ಗ್ರಾಮಗಳಲ್ಲಿ ಈ ಬಾರಿಯ ಮಹಾಮಳೆಗೆ ಹಾಗೂ ಪ್ರವಾಹಕ್ಕೆ ಸಿಲುಕಿ ಹಾನಿಗೊಳಗಾದ ಮನೆಗಳನ್ನು ಗ್ರಾಮ ಪಂಚಾಯತಿ ವತಿಯಿಂದ ಜಿಪಿಎಸ್ ಮೂಲಕ ಚಿತ್ರೀಕರಿಸಿ ದಾಖಲಿಸಲಾಯಿತು ಕಳೆದ ಆಗಸ್ಟ್ ತಿಂಗಳಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಹಾಗೂ ಪ್ರವಾಹ ದಿಂದಾಗಿ ಹಾನಿಗೊಳಗಾದ ಬರಡಿ ನಲವತ್ತೇ ಕರೆ ಕುಂಬರಗುಂಡಿ ಬೆಟ್ಟದ ಕಾಡು ಈ ಭಾಗದ ಮನೆಗಳ ಹಾನಿಗಳನ್ನು ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ಪಿಡಿಒ ಅನಿಲ್‍ಕುಮಾರ್ ಜಿಪಿಎಸ್ ಮೂಲಕ ಚಿತ್ರಗಳನ್ನು ತೆಗೆದು ಹಾನಿಗಳ ಪ್ರಮಾಣವನ್ನು ದಾಖಲಿಸಿಕೊಂಡರು ಈ ಬಾರಿಯ ಪ್ರವಾಹಕ್ಕೆ ನೆಲ್ಯಹುದಿಕೇರಿ ಗ್ರಾಮದ ಬೆಟ್ಟದ ಕಾಡು ಕುಂಬರಗುಂಡಿ ಭಾಗದ ನದಿತೀರದ ನೂರಾರು ಮನೆಗಳು ಹಾನಿಯಾಗಿತ್ತು ಅಲ್ಲದೆ 40ಕ್ಕೂ ಅಧಿಕ ಮನೆಗಳು ಸಂಪೂರ್ಣ ನೆಲಸಮ ಗೊಂಡಿತ್ತು ಈ ಹಿನ್ನೆಲೆಯಲ್ಲಿ ಮನೆ ಕಳೆದುಕೊಂಡ 50ಕ್ಕೂ ಅಧಿಕ ಕುಟುಂಬಗಳು ಸ್ಥಳೀಯ ಸರಕಾರಿ ಪ್ರಾಥಮಿಕ ಶಾಲೆಯ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿದ್ದರು. ಇಲ್ಲಿಗೆ ಆಗಮಿಸುವ ಮುಖ್ಯಮಂತ್ರಿಗಳ ಬಳಿ ಹಾಗೂ ಸಚಿವರುಗಳ ವಿರೋಧ ಪಕ್ಷದ ನಾಯಕರ ಬಳಿ ವಿಧಾನಪರಿಷತ್ ಸಭಾಪತಿ ಅವರ ಬಳಿ ಕೂಡ ತಮಗೆ ಕಲ್ಪಿಸಿಕೊಡುವಂತೆ ಸಂತ್ರಸ್ತರು ಮನವಿ ಮಾಡಿಕೊಂಡಿದ್ದರು.
ಆದರೆ ಈವರೆಗೂ ಸಂತ್ರಸ್ತರಿಗೆ ಪುನರ್ವಸತಿ ಲಭಿಸಿರುವದಿಲ್ಲ. ಜಿಲ್ಲಾಡಳಿತವು ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಜಾಗಗಳಿಗಾಗಿ ಹುಡುಕಾಟ ನಡೆಸುತ್ತಿದೆ. ತಮಗೆ ಯಾವಾಗ ಪುನರ್ವಸತಿ ಲಭಿಸುವದೆಂದು ಚಿಂತಾಕ್ರಾಂತರಾಗಿದ್ದಾರೆ ತಮ್ಮ ಮಕ್ಕಳೊಂದಿಗೆ ಪರಿಹಾರ ಕೇಂದ್ರದಲ್ಲಿ ಕಳೆದ ನಾಲ್ಕು ತಿಂಗಳಿಂದ ಆಶ್ರಯ ಪಡೆದಿದ್ದು ಮಕ್ಕಳು ಕೂಡ ಪರಿಹಾರ ಕೇಂದ್ರದಿಂದ ಶಾಲೆಗಳಿಗೆ ತೆರಳುತ್ತಿದ್ದಾರೆ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿರುವ ಮಂದಿಗೆ ಕೂಲಿ ಕೆಲಸಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲವೆಂದು ಸಂತ್ರಸ್ತರು ಅಳಲು ತೋಡಿಕೊಂಡಿದ್ದಾರೆ.