ಮಡಿಕೇರಿ, ನ. 21 : ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ವತಿಯಿಂದ ನ.24 ರಂದು ಮಡಿಕೆÉೀರಿಯಲ್ಲಿ 29ನೇ ಕೊಡವ ನ್ಯಾಷನಲ್ ಡೇ ನಡೆಯಲಿದ್ದು, ಸಮಾವೇಶದಲ್ಲಿ ಮೂರು ಪ್ರಮುಖ ನಿರ್ಣಯಗಳನ್ನು ಮಂಡಿಸಲಾಗುವದು ಎಂದು ಸಿಎನ್‍ಸಿ ಅಧ್ಯಕ್ಷ ಎನ್.ಯು. ನಾಚಪ್ಪ ತಿಳಿಸಿದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾವೇಶಕ್ಕೂ ಮೊದಲು ನಗರದ ಮುಖ್ಯ ಬೀದಿಗಳಲ್ಲಿ ಕೊಡವರ ಸಾಂಪ್ರದಾಯಿಕ ಉಡುಪಿನೊಂದಿಗೆ ಬೃಹತ್ ಮೆರವಣಿಗೆ ನಡೆಯಲಿದೆ ಎಂದರು. ಗಾಂಧಿ ಮೈದಾನದಲ್ಲಿ ವೇದಿಕೆಯಲ್ಲಿ ಧ್ವಜಾರೋಹಣ ನೆರವೇರಿಸ ಲಾಗುವದು. ಸಮಾವೇಶದೊಂದಿಗೆ ಕೊಡವ ಸಾಂಪ್ರದಾಯಿಕ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ ಯೆಂದು ಅವರು ತಿಳಿಸಿದರು.

ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆಯ ಸ್ವಯಂ ನಿರ್ಣಯ ಹಕ್ಕು, ಎಸ್‍ಟಿ ಪಟ್ಟಿಯಲ್ಲಿ ಕೊಡವ ಬುಡಕಟ್ಟು ಕುಲವನ್ನು ಸೇರಿಸಿ ರಾಜ್ಯಾಂಗ ಖಾತರಿ ನೀಡುವುದು ಮತ್ತು ವಿನಾಶದಂಚಿನಲ್ಲಿರುವ ಅತೀ ಸೂಕ್ಷ್ಮ ಅಲ್ಪ ಸಂಖ್ಯಾತ ಕೊಡವ ಬುಡಕಟ್ಟು ಕುಲವನ್ನು ವಿಶ್ವ ರಾಷ್ಟ್ರ ಸಂಸ್ಥೆಯ ಯುನೆಸ್ಕೋದ ಇಂಟ್ಯಾಂಜಿಬಲ್ ಕಲ್ಚರಲ್ ಹೆರಿಟೇಜ್ ಪಟ್ಟಿಗೆ ಸೇರಿಸಬೆÉೀಕೆಂಬ ಹಕ್ಕೊತ್ತಾಯವನ್ನು ಸಮಾವೇಶದಲ್ಲಿ ಮಂಡಿಸಲಾಗುವುದು ಎಂದು ನಾಚಪ್ಪ ತಿಳಿಸಿದರು.

ಕೊಡಗು ಮಾತ್ರವಲ್ಲದೆ ವಿವಿಧೆಡೆ ವಾಸವಿರುವ ಎಲ್ಲಾ ಕೊಡವರು ಸೇರಿದಂತೆ ಸಾವಿರಾರು ಮಂದಿ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಕೊಡವರು ಬುಡಕಟ್ಟು ಸಮುದಾಯಕ್ಕೆ ಸೇರಿದವರೆಂದು ಸಾಕ್ಷೀಕರಿಸುವ ಅಂಶಗಳಲ್ಲಿ ಒಂದಾದ ಹಳೆಯ ಪರಿಕರಗಳ ಪ್ರದರ್ಶನ ಕೂಡ ಇದೇ ಸಂದರ್ಭ ನಡೆಯಲಿದೆ. ಕಳೆÉದ 29 ವರ್ಷಗಳಿಂದ ಕೊಡವರ ಹಕ್ಕಿಗಾಗಿ ಶಾಂತಿಯುತ ಹೋರಾಟ ವನ್ನು ನಡೆಸಿಕೊಂಡು ಬಂದಿರುವ ಸಂಘಟನೆ ಗುರಿ ಮುಟ್ಟುವಲ್ಲಿಯವರೆಗೆ ಸಂವಿಧಾನದತ್ತವಾದ ಹೋರಾಟವನ್ನೆ ನಡೆಸಲಿದೆ. ದೇಶದ ಗಡಿ ಕಾಯುವ ಕೊಡಗಿನ ಕೊಡವ ಸಮುದಾಯದ ಮಂದಿಯನ್ನು ಬಹುಸಂಖ್ಯಾತರು ರಕ್ಷಿಸಬೇಕಾಗಿದೆ. ಆದರೆ, ಕೊಡಗು ಕರ್ನಾಟಕದೊಂದಿಗೆ ವಿಲೀನ ವಾದಾಗಿನಿಂದ ಕೆಲವರು ಬ್ಲ್ಯಾಕ್ ಮೇಲ್ ತಂತ್ರಗಾರಿಕೆ ಮತ್ತು ಷಡ್ಯಂತ್ರಗಳನ್ನು ಉಪಯೋಗಿಸಿ ಕೊಡವರನ್ನು ತುಳಿಯುತ್ತಾ ಬಂದಿದ್ದಾರೆ ಎಂದು ಆರೋಪಿಸಿದರು.

ನಾವು ಮತ್ತೊಂದು ಸಂಸ್ಕøತಿಯನ್ನು ಗೌರವಿಸುತ್ತೇವೆ. ಅದೇ ರೀತಿ ಇತರರು ಕೂಡ ಕೊಡವ ಸಂಸ್ಕøತಿಯನ್ನು ಗೌರವಿಸಬೇಕು. ಒಂದು ಸಂಸ್ಕøತಿಯ ಮೇಲೆ ಮತ್ತೊಂದು ಸಂಸ್ಕøತಿ ಸವಾರಿ ಮಾಡಬಾರದು ಎಂದರು.

ಸುದ್ದಿಗೋಷ್ಠಿಯಲ್ಲಿ ಚಂಬಂಡ ಜನತ್ ಹಾಗೂ ಪುದಿಯೊಕ್ಕಡ ಕಾಶಿ ಉಪಸ್ಥಿತರಿದ್ದರು.