ಮಡಿಕೇರಿ, ನ. 21: ನೆಲಜಿ ಫಾರ್ಮರ್ಸ್ ರಿಕ್ರಿಯೇಷನ್ ಮತ್ತು ಡೆವಲಪ್‍ಮೆಂಟ್ ಅಸೋಸಿಯೇಷನ್ ವತಿಯಿಂದ ಇತ್ತೀಚೆಗೆ ನೆಲಜಿ ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ರಾಜ್ಯಮಟ್ಟದ ತೆಂಗೆಬೊಡಿ ಸ್ಪರ್ಧೆಯಲ್ಲಿ ಪಟ್ಟಮಾಡ ವಿಪಿನ್ ಪ್ರಥಮ ಸ್ಥಾನ ಗಳಿಸಿದ್ದಾರೆ. ಇದರೊಂದಿಗೆ ಅವರು ರೂ. 50 ಸಾವಿರ ನಗದು, ಟ್ರೋಫಿಯನ್ನು ತಮ್ಮದಾಗಿಸಿಕೊಂಡರು. ತಾ. 16ರ ಪತ್ರಿಕೆಯಲ್ಲಿ ಪ್ರಥಮ ಸ್ಥಾನ ಗಳಿಸಿದವರ ಹೆಸರು ತಪ್ಪಾಗಿತ್ತು. ಕ್ಲಬ್‍ನಿಂದ ರೂ. 50 ಸಾವಿರ ನಗದು ಬಹುಮಾನ ನೀಡಿದರೆ, ಮಂಡೇಡ ಗಿರಿ ಅವರು ಪ್ರಥಮ ಸ್ಥಾನದ ಟ್ರೋಫಿಯನ್ನು ಪ್ರಾಯೋಜಿಸಿದ್ದರು.