ಬೆಂಗಳೂರು, ನ. 21: ಕರ್ನಾಟಕ ಪ್ಲಾಂಟರ್ಸ್ ಸಂಘದ 61ನೇ ವಾರ್ಷಿಕ ಸಭೆಯು ತಾ. 13ರಂದು ಬೆಂಗಳೂರಿನ ಲಲಿತ್ ಅಶೋಕ್‍ನಲ್ಲಿ ನಡೆಯಿತು. ಸಂಘದ ಕಾರ್ಯನಿರ್ವಾಹಕ ಸಮಿತಿಯ 2019-20ರ ಸಾಲಿನ ಅಧ್ಯಕ್ಷರಾಗಿ ಶಿರೀಷ್ ವಿಜಯೇಂದ್ರ, ಉಪಾಧ್ಯಕ್ಷರಾಗಿ ಎಸ್. ಅಪ್ಪಡುರಯ್ ಹಾಗೂ ಸದಸ್ಯರುಗಳಾಗಿ ಮಹೇಶ್, ಶಶಿಧರ್, ಎ. ಅರವಿಂದ್ ರಾವ್, ಯಶ್‍ವಂತ್ ಆರ್. ಗಿರ್‍ಜೇರ್, ಎನ್. ರಾಮನಾಥನ್, ವಹೀದ್ ನಾಖ್ವಿ, ನಿರಾದ್ ಮುತ್ತಣ್ಣ, ಕೆ.ಜಿ. ರಾಜೀವ್, ಎಮ್. ಸಲ್‍ಮಾನ್ ಬಸೀರ್ ಹಾಗೂ ಎಂ.ಜಿ. ದೇವಯ್ಯ ಆಯ್ಕೆಯಾಗಿದ್ದಾರೆ.