ಸೋಮವಾರಪೇಟೆ, ನ. 20: ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ಸೋಮವಾರಪೇಟೆಗೆ ಖಾಸಗಿ ಭೇಟಿ ನೀಡಿ, ಮದುವೆ ಸಮಾರಂಭವೊಂದರಲ್ಲಿ ಭಾಗಿಯಾದರು.
ಸಮೀಪದ ನೇಗಳ್ಳೆ ಕರ್ಕಳ್ಳಿ ಗ್ರಾಮದ ಅರವಿಂದ್ ಅವರ ಪುತ್ರಿ ಹರ್ಷಿತ ಹಾಗೂ ಕುಮಾರಸ್ವಾಮಿ ಅವರ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಬೆಂಗಳೂರಿನ ಚಂದನ್ ಅವರುಗಳ ವಿವಾಹ ಸಮಾರಂಭ ಇಲ್ಲಿನ ಗೌಡ ಸಮುದಾಯ ಭವನದಲ್ಲಿ ಆಯೋಜನೆಗೊಂಡಿದ್ದು, ಈ ಹಿನ್ನೆಲೆ ಮಾಜಿ ಮುಖ್ಯಮಂತ್ರಿಗಳು ಸಮಾರಂಭಕ್ಕೆ ಆಗಮಿಸಿದ್ದರು.
ಮದುವೆಗೆ ಆಗಮಿಸಿದ ಮಾಜೀ ಮುಖ್ಯಮಂತ್ರಿಯನ್ನು ನೋಡಲು ಜೆಡಿಎಸ್ ಕಾರ್ಯಕರ್ತರು, ಮದುವೆಯ ಆಮಂತ್ರಿತರು, ಸಾರ್ವಜನಿಕರು ಮುಗಿಬಿದ್ದರು.