ವೀರಾಜಪೇಟೆ, ನ.20: ವೀರಾಜಪೇಟೆ ಬಳಿಯ ಹೆಗ್ಗಳ ಗ್ರಾಮದ ಅಯ್ಯಪ್ಪ ಭಗವತಿ ದೇವಸ್ಥಾನದಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಮಹಾ ಪೂಜಾ ಮಹೋತ್ಸವ ತಾ.23ರಂದು ನಡೆಯಲಿದೆ.
ಪೂಜೋತ್ಸವದ ಪ್ರಯುಕ್ತ ಅಂದು ಬೆಳಿಗ್ಗೆ 10ಗಂಟೆಗೆ ದೇವರಿಗೆ ಅಲಂಕಾರ ಪೂಜೆ, 11 ಗಂಟೆಗೆ ರುದ್ರಾಭಿಷೇಕ ಹಾಗೂ 12 ಗಂಟೆಗೆ ಮಹಾ ಪೂಜಾ ಸೇವೆ ನಡೆಯಲಿದೆ. ನಂತರ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ ಎಂದು ದೇವಾಲಯ ಪ್ರಕಟಣೆ ತಿಳಿಸಿದೆ.