ಮಡಿಕೇರಿ. ನ.19 - ವಿಶ್ವ ಮಧುಮೇಹ ದಿನಾಚರಣೆ ಅಂಗವಾಗಿ ಮಡಿಕೇರಿ ರೋಟರಿ ಕ್ಲಬ್ ವತಿಯಿಂದ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಇನ್ನರ್ ವೀಲ್ ಸಂಸ್ಥೆಗಳ ಸಹಯೋಗದಲ್ಲಿ ಕಾರಾಗೃಹದಲ್ಲಿ ಮಧುಮೇಹ ತಪಾಸಣಾ ಕಾರ್ಯಕ್ರಮ ಆಯೋಜಿತವಾಗಿತ್ತು.
ಡಿವೈಎಸ್ಪಿ ದಿನೇಶ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಮಡಿಕೇರಿ ಕಾರಾಗೃಹದಲ್ಲಿನ 210 ಸೆರೆವಾಸಿಗಳಿಗೆ ಮಧುಮೇಹ, ನೇತ್ರ, ದಂತ, ಮಾನಸಿಕ ಒತ್ತಡ ಸೇರಿದಂತೆ ಆರೋಗ್ಯ ಸಂಬಂಧಿತ ವಿವಿಧ ತಪಾಸಣೆ ಕೈಗೊಂಡು ಸೂಕ್ತ ಚಿಕಿತ್ಸೆ ನೀಡಲಾಯಿತು.
ರೋಟರಿ ವತಿಯಿಂದ ಸೆರೆಮನೆಯ ಅಧೀಕ್ಷಕರಿಗೆ ಗ್ಲುಕೋ ಮೀಟರ್ ಕೊಡುಗೆಯಾಗಿ ನೀಡಲಾಯಿತು.
ರೋಟರಿ ಅಧ್ಯಕ್ಷ ಕೆ. ಎಸ್. ರತನ್ ತಮ್ಮಯ್ಯ, ಕಾರ್ಯದರ್ಶಿ ಕೆ.ಸಿ.ಕಾರ್ಯಪ್ಪ, ಡಾ.ಮೋಹನ್ ಅಪ್ಪಾಜಿ, ಡಾ.ವಿಕ್ರಂ, ಡಾ. ಶಿವಕುಮಾರ್, ಇನ್ನರ್ ವೀಲ್ ಅಧ್ಯಕ್ಷೆ ನಿಶಾ ಮೋಹನ್, ಮಡಿಕೇರಿ ರೋಟರಿ ನಿರ್ದೇಶಕರಾದ ಲಲಿತಾ ರಾಘವನ್, ಕಾರಾಗೃಹದ ಅಧೀಕ್ಷಕ ಕೃಷ್ಣಮೂರ್ತಿ, ಅಧಿಕಾರಿ ಚಂದನ್ ಸೇರಿದಂತೆ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವೈದ್ಯರು, ಸಿಬ್ಬಂದಿಗಳು ಹಾಜರಿದ್ದರು.