ಸುಂಟಿಕೊಪ್ಪ, ನ. 20: ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1986-87ನೇ ಸಾಲಿನ 7ನೇ ತರಗತಿ ವಿದ್ಯಾರ್ಥಿ ಸಂಘದ ವತಿಯಿಂದ ಮಕ್ಕಳ ದಿನಾಚರಣೆಯ ಅಂಗವಾಗಿ ಶಾಲೆಯ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಭೋಜನದ ವ್ಯವಸ್ಥೆಯನ್ನು ಮಾಡಲಾಯಿತು.
ವಿದ್ಯಾರ್ಥಿಗಳಿಗೆ ಶಾಲೆಯ ವತಿಯಿಂದ ಕ್ರೀಡಾಕೂಟ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ನೆರವೇರಿಸಲಾಯಿತು. 1986-87ನೇ ಸಾಲಿನ ವಿದ್ಯಾರ್ಥಿಗಳ ಸಂಘದ ಶೋಭಾ ಆನಂದ್ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಸಂದರ್ಭ ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ವೀರಾ ಡಿಸೋಜ, ಸಿಸ್ಟರ್ ವೈಲೆಟ್ ರಾಡ್ರಿಗಸ್ ಹಾಗೂ ಶಿಕ್ಷಕರು ಇದ್ದರು.*ಗೋಣಿಕೊಪ್ಪಲು: ದಾಸ ಶ್ರೇಷ್ಠರಾದ ಕನಕದಾಸರು ಸಮಾಜದಲ್ಲಿ ಬೇರೂರಿದ್ದ ಜಾತಿಭೇದವನ್ನು ತೊಡೆದು ಹಾಕಲು ಭಕ್ತಿ ಮಾರ್ಗವನ್ನು ಕಂಡುಕೊಂಡರು. ಆಮೂಲಕ ಜಾತ್ಯತೀತ ಸಮಾಜ ನಿರ್ಮಾಣಕ್ಕೆ ಚಳುವಳಿಯನ್ನು ಆರಂಭಿಸಿದರು ಎಂದು ಬಾಳೆಲೆ ಸೆಂಟರ್ ಎಜುಕೇಷನ್ ಸೊಸೈಟಿ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ ಹೇಳಿದರು.
ಬಾಳೆಲೆ ವಿಜಯಲಕ್ಷ್ಮಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಕನಸದಾಸ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ಕನಕದಾಸರಂತಹ ಶ್ರೇಷ್ಠ ಸಮಾಜ ಸುಧಾರಕರ ಮಾರ್ಗವನ್ನು ಅನುಸರಿಸುವದು ಅಗತ್ಯ ಎಂಬದಾಗಿ ನೆನಪಿಸಿದರು. ಪ್ರಾಂಶುಪಾಲ ಡಾ. ಜೆ. ಸೋಮಣ್ಣ ಮಾತನಾಡಿ, ಭಕ್ತಿ ಮಾರ್ಗದ ಮೂಲಕ ಜಾತಿ ವಿನಾಶಕ್ಕೆ ಮುನ್ನುಡಿ ಬರೆದ ದಾಸ ಶ್ರೇಷ್ಠ ಕನಕದಾಸರು. ಉಡುಪಿಯಲ್ಲಿರುವ ಕನಕನಕಿಂಡಿ ಬಗ್ಗೆ ಆಳವಾದ ಚಿಂತನೆ ಮಾಡುವ ಅಗತ್ಯವಿದೆ. ಕನಕ ದಾಸರ ಕೀರ್ತನೆಗಳನ್ನು ಅಧ್ಯಯನ ಮಾಡುವ ಮೂಲಕ ಸಮಾಜ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕಾಗಿದೆ ಎಂದರು.
ಪ್ರೌಢಶಾಲೆ ವಿಭಾಗದ ಮುಖ್ಯ ಶಿಕ್ಷಕ ಕೆ. ಚಂದ್ರಶೇಖರ್ ಮಾತನಾಡಿ, ಕನಕದಾಸರು ಕೇವಲ ಭಕ್ತಿ ಪಂಥದ ಆರಾಧಕರು ಮಾತ್ರವಲ್ಲ. ಅವರೊಬ್ಬ ಶ್ರೇಷ್ಠ ಚಿಂತಕರಾಗಿದ್ದರು ಎಂದರು. ಉಪನ್ಯಾಸಕ ಕೆ.ಜಿ. ಅಶ್ವಿನಿಕುಮಾರ್ ಮಾತನಾಡಿದರು. ಬಾಳೆಲೆ ಸೆಂಟರ್ ಎಜುಕೇಷನ್ ಸೊಸೈಟಿ ಕೋಶಾಧಿಕಾರಿ ಅಡ್ಡೇಂಗಡ ದೇವಯ್ಯ, ನಿರ್ದೇಶಕರಾದ ಅಡ್ಡೇಂಗಡ ಅರುಣ, ಕಾಟಿಮಾಡ ಶರೀನ್ ಮುತ್ತಣ್ಣ, ಅಳಮೇಂಗಡ ಸುರೇಶ್ ಸುಬ್ಬಯ್ಯ, ಉಪನ್ಯಾಸಕರಾದ ಎನ್.ಕೆ. ಪ್ರಭು, ಪ್ರತಿಭಾ ಉತ್ತಪ್ಪ, ಎಂ.ಪಿ. ರಾಘವೇಂದ್ರ, ಪಿ.ಎ. ಪ್ರಭುಕುಮಾರ್ ಹಾಜರಿದ್ದರು.ಸುಂಟಿಕೊಪ್ಪ: ಸುಂಟಿಕೊಪ್ಪ ಸರಕಾರಿ ಪದವಿಪೂರ್ವ ಕಾಲೇಜು ವತಿಯಿಂದ ಕನಕದಾಸ ಜಯಂತಿಯನ್ನು ಆಚರಿಸಲಾಯಿತು.
ದಿನದ ಮಹತ್ವದ ಕುರಿತು ಮಾತನಾಡಿದ ಉಪನ್ಯಾಸಕ ಬಿ.ಎಂ. ಬೆಳ್ಳಿಯಪ್ಪ, 15-16ನೇ ಶತಮಾನದಲ್ಲಿ ಜಾತಿ ವ್ಯವಸ್ಥೆ ಬಗ್ಗೆ ಸಮರ ಸಾರಿದ, ಸಾಮಾಜಿಕ ಸಮಾನತೆಗೆ ಒತ್ತು ನೀಡಿದ ಕನಕದಾಸರು ಎಲ್ಲಾ ಕಾ¯ಕ್ಕೂ ಪ್ರಸ್ತುತರಾಗುತ್ತಾರೆ. ಅವರ ಕೀರ್ತನೆಗಳು ಆಲಿಸಿದರೆ ಮಾತ್ರ ಸಾಲದು ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪಿ.ಎಸ್. ಜಾನ್, ಕನಕದಾಸರು ರಚಿಸಿದ ರಾಮಧ್ಯಾನ ಚರಿತ್ರೆಯ ಕಾವ್ಯ ಕೃತಿಯಲ್ಲಿ ಕಾಣಿಸಿರುವ ಅಕ್ಕಿ ಮತ್ತು ರಾಗಿ ದಾನ್ಯಗಳ ಸಾಲುಗಳಲ್ಲಿ ಆರ್ಥಿಕತೆಯ ಬೇರು ಮೂಡಿಸಿದೆ ಎಂದು ಹೇಳಿದರು. ಕಾರ್ಯಕ್ರಮವನ್ನು ಉಪನ್ಯಾಸಕ ಎಸ್.ಎ. ಈಶ, ನಿರೂಪಿಸಿದರು, ಉಪನ್ಯಾಸಕರಾಜ ಫಿಲಿಪ್‍ವಾಸ್, ಕವಿತ ಭಕ್ತ್, ಪದ್ಮಾವತಿ, ಕೆ.ಸಿ. ಕವಿತಾ, ಸುಕನ್ಯಾ, ಜಯಶ್ರೀ, ಮಂಜುಳಾ, ಕಾವ್ಯ, ಕನಕ ಉಪಸ್ಥಿತರಿದ್ದರು. ಸೋಮಚಂದ್ರ ವಂದಿಸಿದರು.
ಕೂಡಿಗೆ: ಶಿರಂಗಾಲ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕನಕದಾಸರ ಜಯಂತಿಯನ್ನು ಆಚರಿಸಲಾಯಿತು. ಕನ್ನಡ ಶಿಕ್ಷಕರಾದ ಲಿಯೋನಾ ಮಾತನಾಡಿದರು. ಪ್ರಾಂಶುಪಾಲ ಹಂಡ್ರಂಗಿ ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕ ಸೋಮಯ್ಯ, ಕಾಲೇಜಿನ ಎಲ್ಲ ಉಪನ್ಯಾಸಕರು, ಪ್ರೌಢಶಾಲೆಯ ಶಿಕ್ಷಕರು ಇದ್ದರು.