ಮಡಿಕೇರಿ, ನ. 20: ಮೂರ್ನಾಡು ವಿದ್ಯಾಸಂಸ್ಥೆಯ ಕ್ಲೀನ್ ಇಂಡಿಯಾ ಬ್ರಿಗೇಡ್‍ನ ಅಧ್ಯಕ್ಷರು ಹಾಗೂ ನಿರ್ದೇಶಕ ರಾಜ ಮಾದಪ್ಪ ನೇತೃತ್ವದಲ್ಲಿ ಪದವಿಪೂರ್ವ ಕಾಲೇಜಿನ 49 ಮಂದಿ ಎನ್.ಎಸ್.ಎಸ್. ವಿದ್ಯಾರ್ಥಿಗಳು ಭಾಗಮಂಡಲ ಹಾಗೂ ತಲಕಾವೇರಿಗೆ ಭೇಟಿ ನೀಡಿ ಸ್ವಚ್ಛತಾ ಕಾರ್ಯ ಕೈಗೊಂಡರು. ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿ ಯು.ಸಿ. ಮಾಲತಿ, ಉಪನ್ಯಾಸಕರಾದ ರೋಹಿಣಿ, ಅನುರಾದ, ಗೀತಾ, ದೈಹಿಕ ನಿರ್ದೇಶಕ ಮಂಜುನಾಥ್ ಉಪಸ್ಥಿತರಿದ್ದರು.