ಕುಶಾಲನಗರ, ನ. 20 : ಕುಶಾಲನಗರ ಗಣಪತಿ ದೇವಸ್ಥಾನಕ್ಕೆ ದಾನಿಗಳು ವಿವಿಧ ರೀತಿಯ ಕೊಡುಗೆಗಳನ್ನು ನೀಡಿದ್ದಾರೆ. ಸ್ಥಳೀಯ ಉದ್ಯಮಿ ಸಹದೇವನ್ ನಂಬಿಯಾರ್ ಅವರು ಅಂದಾಜು ರೂ. 1 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಉತ್ಸವ ಮೂರ್ತಿಯ ಬೆಳ್ಳಿ ಕವಚ, ಸ್ಥಳೀಯರಾದ ಕೆ.ಎಸ್.ಮಾಧವರಾವ್ ಅವರು ಸುಮಾರು ರೂ. 75 ಸಾವಿರ ಮೌಲ್ಯದ ಬೆಳ್ಳಿಯ ಪ್ರಭಾವಳಿ, ಸ್ಥಳೀಯ ವಿಷ್ಣು ಮೆಟಲ್ ಉದ್ಯಮಿ ಬೆಳ್ಳಿ ದೀಪ ಮತ್ತು ಮುಖ್ಯ ಅರ್ಚಕ ಆರ್.ಕೆ.ನಾಗೇಂದ್ರಬಾಬು ಅವರು ಮೂಲ ವಿಗ್ರಹಕ್ಕೆ ಪಂಚಲೋಹದ ವಿಗ್ರಹ ಸಾಮಗ್ರಿಗಳನ್ನು ನೀಡಿರುವದಾಗಿ ದೇವಸ್ಥಾನ ಸಮಿತಿ ಅಧ್ಯಕ್ಷ ವಿ.ಎನ್.ವಸಂತಕುಮಾರ್ ಮಾಹಿತಿ ನೀಡಿದ್ದಾರೆ.

ಇತ್ತೀಚೆಗಷ್ಟೆ ಕುಶಾಲನಗರದ ಖ್ಯಾತ ಉದ್ಯಮಿ ಎಸ್.ಎಲ್.ಎನ್. ಸಾತಪ್ಪನ್ ಮತ್ತು ದಂಪತಿಗಳು ಗಣಪತಿಯ ಮೂಲ ವಿಗ್ರಹಕ್ಕೆ ಅಂದಾಜು ರೂ. 5 ಲಕ್ಷ ರು ಮೌಲ್ಯದ ಬೆಳ್ಳಿ ಕವಚ ಮತ್ತು ಪೀಠಗಳನ್ನು ಬೆಳ್ಳಿ ಆಭರಣಗಳನ್ನು ದೇವಾಲಯಕ್ಕೆ ದಾನ ನೀಡಿರುವದಾಗಿ ವಸಂತಕುಮಾರ್ ತಿಳಿಸಿದರು.