ಗುಡ್ಡೆಹೊಸೂರು, ನ. 20: ಗುಡ್ಡೆಹೊಸೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸಣ್ಣದಕೆರೆ ರಸ್ತೆಯನ್ನು ರೂ. 25 ಲಕ್ಷ ವೆಚ್ಚದಲ್ಲಿ ಕಾಕ್ರೀಟ್ ರಸ್ತೆಯಾಗಿ ಮಾಡಲು ಶಾಸಕರು ಭೂಮಿ ಪೂಜೆಯನ್ನು ನೆರವೇರಿಸಿದರು.

ದೊಡ್ಡಬೆಟ್ಟಗೇರಿಯಲ್ಲಿ ರೂ. 28 ಲಕ್ಷದ ಕಾಮಗಾರಿ, ಚಿಕ್ಕಬೆಟ್ಟಗೇರಿಯಲ್ಲಿ ರೂ. 25 ಲಕ್ಷದ ಕಾಮಗಾರಿ, ಮಾದಪಟ್ಟಣದ ಬಸವೇಶ್ವರ ದೇವಸ್ಥಾನ ಮುಂಭಾಗದಲ್ಲಿ ರೂ. 20 ಲಕ್ಷದ ಕಾಮಗಾರಿಗೆ ಶಾಸಕರು ಭೂಮಿಪೂಜೆ ನಡೆಸಿದರು. ಈ ಸಂದಭರ್À ಗುಡ್ಡೆಹೊಸೂರು ಗ್ರಾ.ಪಂ. ಅಧ್ಯಕ್ಷೆ ಕೆ.ಎಸ್. ಭಾರತಿ ಮತ್ತು ಪಿ.ಡಿ.ಓ ಶ್ಯಾಂ ಮತ್ತು ಸದಸ್ಯರಾದ ಕವಿತಾ, ನಾರಾಯಣ, ಭೀಮಯ್ಯ, ಡಾಟಿ, ಪಾರ್ವತಿ, ಗಂಗೆ, ಪುಷ್ಪ, ಪ್ರವೀಣ್, ಶಿವಪ್ಪ, ಬಸವರಾಜ್. ಈ ವಿಭಾಗದ ಬಿ.ಜೆ.ಪಿ. ಪ್ರಮುಖರಾದ ಎಂ.ಆರ್. ಉತ್ತಪ್ಪ (ಚಿಮ್ಮ) ಜಿ.ಎಂ. ಮಣಿಕುಮಾರ್, ಜಿ.ಪಂ. ಇಂಜಿನಿಯರ್ ಫಯಾಜ್, ತಾ.ಪಂ. ಕಾರ್ಯಪಾಲಕ ಅಭಿಯಂತರ ವೀರೇಂದ್ರ ಹಾಜರಿದ್ದರು. ಇದೇ ವೇಳೆ ರಸ್ತೆ ಕಾಮಗಾರಿ ಮುಗಿದಿದ್ದ ರಸ್ತೆಗಳನ್ನು ಶಾಸಕರು ಉದ್ಘಾಟಿಸಿದರು.