ಮಡಿಕೇರಿ, ನ. 20: ಸುಂಟಿಕೊಪ್ಪ ಬಳಿ ಅತ್ತೂರು ನಲ್ಲೂರು ‘ಡಿ’ ತೋಟದ ಕಾರ್ಮಿಕ ಎನ್.ಬಾಬು ಎಂಬವರ ಮನೆಯ ಬೀಗ ತೆರೆದು ಒಳನುಗ್ಗಿರುವ ಕಳ್ಳರು ಬೀರುವಿನಿಂದ ರೂ.24,500 ಮೌಲ್ಯದ ಚಿನ್ನದ ಕಿವಿಯೋಲೆ ಹಾಗೂ ಸರ ಕದ್ದೊಯ್ದಿರುವದಾಗಿ ಪೊಲೀಸರಿಗೆ ಪುಕಾರಾಗಿದೆ. ಹಗಲು ವೇಳೆ ತೋಟ ಕೆಲಸಕ್ಕೆ ತೆರಳಿದ ಸಂದರ್ಭ ಶಂಕಿತ ಪರಿಚಿತರೇ ಈ ಕೃತ್ಯ ಎಸಗಿರುವದಾಗಿ ಬಾಬು ಆರೋಪಿಸಿದ್ದು, ಸುಂಟಿಕೊಪ್ಪ ಠಾಣಾಧಿಕಾರಿ ಮತ್ತು ಸಿಬ್ಬಂದಿ ತನಿಖೆ ಕೈಗೊಂಡಿದ್ದಾರೆ.