ಹೊದ್ದೂರು, ನ. 20: ಮೂರ್ನಾಡು ಸನಿಹದ ಹೊದ್ದೂರುವಿನಲ್ಲಿ ಸುಮಾರು 150 ಲಕ್ಷ ವೆಚ್ಚದಲ್ಲಿ ಶ್ರೀಶಾಸ್ತ ಈಶ್ವರ ದೇಗುಲ ಪುನರ್ ನಿರ್ಮಾಣವಾಗುತ್ತಿದೆ. ದೇಗುಲಕ್ಕೆ ಧರ್ಮಸ್ಥಳದ ಮಂಜುನಾಥ ದೇವಳದ ವತಿಯಿಂದ ನೀಡಲಾದ ದೇಣಿಗೆಯನ್ನು ಹಸ್ತಾಂತರಿಸುವ ಕಾರ್ಯಕ್ರಮ ನಡೆಯಿತು.
ಶ್ರೀಶಾಸ್ತ ಈಶ್ವರ ದೇಗುಲದ ಆವರಣದಲ್ಲಿ ಸರಳ ಕಾರ್ಯಕ್ರಮ ಆಯೋಜಿತವಾಗಿತ್ತು. ಧರ್ಮಸ್ಥಳ ಸೇವಾ ಯೋಜನೆಯ ಮಡಿಕೇರಿ-ವೀರಾಜಪೇಟೆ ತಾಲೂಕುಗಳ ಯೋಜನಾಧಿಕಾರಿ ಸದಾಶಿವ ಗೌಡ ಮತ್ತಿತರರು 2 ಲಕ್ಷ ರೂಪಾಯಿ ಮೌಲ್ಯದ ಚೆಕ್ ಅನ್ನು ಪ್ರಮುಖರಿಗೆ ನೀಡಿದರು. ಕೂಡಂಡ ಕುಟುಂಬದ ಪಟ್ಟೇದಾರರಾದ ಪೆಮ್ಮಯ್ಯ, ದೇಗುಲ ಪುನರ್ ನಿರ್ಮಾಣ ಸಮಿತಿಯ ಪ್ರಮುಖರು ಚೆಕ್ ಅನ್ನು ಪಡೆದುಕೊಂಡರು.
ಈ ಸಂದರ್ಭ ಧರ್ಮಸ್ಥಳ ಸೇವಾ ಯೋಜನೆಯ ಮೂರ್ನಾಡು ವಲಯದ ಮೇಲ್ವಿಚಾರಕಿ ಜಯಶ್ರೀ. ಎನ್, ಹೊದ್ದೂರು ‘ಎ’ ವಿಭಾಗದ ಅಧ್ಯಕ್ಷೆ ತೆಕ್ಕಡೆ ರಾಜೇಶ್ವರಿ ಲಕ್ಷ್ಮಣ್, ಮಾಜಿ ಅಧ್ಯಕ್ಷ ಚೆಟ್ಟಿಮಾಡ ಎಲ್. ಲಕ್ಷ್ಮಣ್, ಸೇವಾ ಪ್ರತಿನಿಧಿ ಮಮ್ತಾಜ್ ಇಬ್ರಾಹಿಂ, ಕಾರ್ಯದರ್ಶಿ ಹೆಚ್.ಜೆ. ರಮೇಶ್, ದೇಗುಲ ಪುನರ್ ನಿರ್ಮಾಣ ಸಮಿತಿಯ ಪದಾಧಿಕಾರಿಗಳಾದ ಕೂಡಂಡ ಸಾಬ ಸುಬ್ರಮಣಿ, ಕೂಡಂಡ ಸೋಮಣ್ಣ ಮತ್ತು ಕೂಡಂಡ ಕುಟುಂಬದ ಪ್ರಮುಖರು, ಧರ್ಮಸ್ಥಳ ಸೇವಾ ಯೋಜನೆಯ ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಹಾಜರಿದ್ದರು.