ಶನಿವಾರಸಂತೆ, ನ. 20: ಬೆಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನಾರೆ ಗ್ರಾಮದಲ್ಲಿ ಸೋಮವಾರಪೇಟೆ ತಾ.ಪಂ. ಸದಸ್ಯ ಹೆಚ್.ಬಿ. ಕುಶಾಲಪ್ಪ ಅವರ ಅನುದಾನದ ರೂ. 3.10 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಬಸ್ ತಂಗುದಾಣ ಹಾಗೂ ಚರಂಡಿ ಕಾಮಗಾರಿಗೆ ಕೊಡ್ಲಿಪೇಟೆ ಮಠದ ಮಠಾಧೀಶ ಸದಾಶಿವ ಸ್ವಾಮಿ ಭೂಮಿಪೂಜೆ ನೆರವೇರಿಸಿದರು.
ಈ ಸಂದರ್ಭ ತಾ.ಪಂ. ಸದಸ್ಯ ಕುಶಾಲಪ್ಪ, ಗ್ರಾಮಸ್ಥರಾದ ಸಿ.ಎಂ. ವಸಂತ, ಮನು ಸಿ.ಕೆ., ಹಾಲಪ್ಪ, ಸಿ.ಕೆ. ಜವರಯ್ಯ, ಕೆ.ಜಿ. ವೀರಪ್ಪ, ಹೇಮಲತ, ಜಯಮ್ಮ, ಮಂಜುಳಾ, ಸುಧಾ, ಮೀನಾಕ್ಷಿ, ಪ್ರೇಮ್ ಕುಮಾರ್, ಗುಣ, ಪ್ರಸನ್ನ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹೆಚ್.ಎಸ್. ರಾಮು, ಗುತ್ತಿಗೆದಾರ ಲತೀಫ್, ಇತರ ಗ್ರಾಮಸ್ಥರು ಉಪಸ್ಥಿತರಿದ್ದರು.