ಮಡಿಕೇರಿ, ನ. 20: ಕರ್ನಾಟಕ ಸಾಹಿತ್ಯ ಅಕಾಡೆಮಿಯು 2019ರ ಡಿಸೆಂಬರ್ 2ನೇ ವಾರದಲ್ಲಿ ವಿಶೇಷ ಘಟಕ ಯೋಜನೆಯಡಿ ರಾಜ್ಯಮಟ್ಟದ ಐದು ದಿನಗಳ ‘ದಲಿತ ಕಲ್ಯಾಣ: ಸವಾಲು ಮತ್ತು ಅವಕಾಶಗಳು ಎಂಬ ಕಮ್ಮಟವನ್ನು ಏರ್ಪಡಿಸಿದೆ. ಆಸಕ್ತಿಯಿರುವ 18 ರಿಂದ 30 ವರ್ಷ ವಯಸ್ಸಿನ ರಾಜ್ಯದ ಎಲ್ಲಾ ಭಾಗದ ಪರಿಶಿಷ್ಟ ಜಾತಿಗೆ ಸೇರಿದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ತಾ. 25 ಕೊನೆಯ ದಿನವಾಗಿದೆ. ಆಸಕ್ತ ಅಭ್ಯರ್ಥಿಗಳು ಕರ್ನಾಟಕ ಸಾಹಿತ್ಯ ಅಕಾಡೆಮಿಯ ವೆಬ್‍ಸೈಟ್ hಣಣಠಿ://ಞಚಿಡಿಟಿಚಿಣಚಿಞಚಿsಚಿhiಣhಥಿಚಿಚಿಛಿಚಿಜemಥಿ.oಡಿg ನಿಂದ ಅರ್ಜಿ ನಮೂನೆ ಹಾಗೂ ವಿವರಗಳನ್ನು ಪಡೆದುಕೊಳ್ಳಬಹುದು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಎನ್. ಕರಿಯಪ್ಪ ತಿಳಿಸಿದ್ದಾರೆ.