ಭಾಗಮಂಡಲ, ನ. 18: ತುಲಾಸಂಕ್ರಮಣದ ಅಂಗವಾಗಿ ತಲಕಾವೇರಿಯ ಕಾವೇರಿ ಮಾತೆಗೆ ತೊಡಿಸಲಾದ ಚಿನ್ನಾಭರಣಗಳನ್ನು ಹಿಂತಿರುಗಿಸಲಾಯಿತು. ಒಂದು ತಿಂಗಳ ಹಿಂದೆ ಜಾತ್ರೆಯ ಸಂದರ್ಭ ಕಾವೇರಿ ಮಾತೆಗೆ ತೊಡಿಸಲಾದ ಚಿನ್ನಾಭರಣಗಳನ್ನು ಕಿರುಸಂಕ್ರಮಣ ಪೂರ್ಣಗೊಂಡ ಹಿನ್ನೆಲೆಯಲ್ಲಿ ಇಂದು ಭಾಗಮಂಡಲ ವ್ಯವಸ್ಥಾಪನಾ ಸಮಿತಿ ಕಾರ್ಯ ನಿರ್ವಹಣಾಧಿಕಾರಿಗೆ ಹಸ್ತಾಂತರಿಸ ಲಾಯಿತು. ಆಭರಣ ಗಳನ್ನು ತಕ್ಕರಾದ ಕೋಡಿ ಮೋಟಯ್ಯ, ವಾದ್ಯಗೋಷ್ಟಿಯೊಂದಿಗೆ ಮೆರವಣಿಗೆಯಲ್ಲಿ ತಂದು ದೇವಾಲಯದಲ್ಲಿ ಹಸ್ತಾಂತರಿ ಸಿದರು.